ನಿಮಗೆ ಉಗುರು ಕಚ್ಚೋ ಅಭ್ಯಾಸವಿದ್ಯಾ? ಈ ಡೇಂಜರ್ ಕಾಯಿಲೆ ಎದುರಿಸೋಕೆ ರೆಡಿಯಾಗಿ!

ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಬಾಯಿಗೆ ಬೆರಳು ಹಾಕಿಕೊಂಡು ಚೀಪುವ ಅಭ್ಯಾಸವಿರುತ್ತದೆ.

ಕ್ರಮೇಣವಾಗಿ ಇದು ಮುಂದುವರೆದು ಉಗುರು ಕಡಿಯುವ ಅಭ್ಯಾಸವಾಗಿ ಬದಲಾಗುತ್ತದೆ.

ಮಕ್ಕಳಾಗಿದ್ದಾಗ ಶುರುವಾಗುವ ಈ ಅಭ್ಯಾಸ ಕೆಲ ಮಂದಿಯಲ್ಲಿ ಜೀವನ ಪೂರ್ತಿ ಮುಂದುವರೆಯಬಹುದು.

ಉಗುರು ಕಚ್ಚುವ ನಿಮ್ಮ ಈ ಅಭ್ಯಾಸವು ದೇಹಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.

ಅಧ್ಯಯನವೊಂದರ ಪ್ರಕಾರ, ಪ್ರಪಂಚದಲ್ಲಿ ಸುಮಾರು 30% ಮಂದಿ ಉಗುರು ಕಚ್ಚುವ ಅಭ್ಯಾಸ ಹೊಂದಿದ್ದಾರೆ.

ಉಗುರು ಕಚ್ಚುವುದರಿಂದ ಉಗುರುಗಳಲ್ಲಿರುವ ಬ್ಯಾಕ್ಟೀರಿಯಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುತ್ತದೆ.

ಪರೋನಿಚಿಯಾ ಎಂಬ ಬ್ಯಾಕ್ಟೀರಿಯಾದ ಸೋಂಕು ನಮ್ಮ ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಉಗುರುಗಳನ್ನು ಜಗಿಯುವುದು ಅಥವಾ ಕಚ್ಚುವುದು ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ.

ಹಲ್ಲುನೋವು ರಕ್ತಸ್ರಾವಕ್ಕೆ ಕಾರಣವಾಗಬಹುದು. ಆದ್ದರಿಂದ ಉಗುರುಗಳನ್ನು ಕಚ್ಚಬಾರದು.

ಹೇರ್ ಕಲರಿಂಗ್ ಮಾಡೋರೇ ಎಚ್ಚರ