ಹಾಗಲಕಾಯಿ ಸಹಿತ ಹಸಿ ತರಕಾರಿಗಳನ್ನು ಗಬಗಬನೆ ತಿಂದ ನಾರಿಯರು!

ಕಾಫಿನಾಡಿನಲ್ಲಿ ಮತದಾನ ಹಬ್ಬದ ಪ್ರಯುಕ್ತ ಹಸಿ ತರಕಾರಿ ತಿನ್ನುವ ಸ್ಪರ್ಧೆ ನಡೆಯಿತು.

ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಸಲುವಾಗಿ ನಗರದ ಎಂ.ಜಿ. ರೋಡ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲಾಡಳಿತ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯು ಮಹಿಳೆಯರಿಗೆ ತರಕಾರಿ ತಿನ್ನುವ ಸ್ಪರ್ಧೆ ಆಯೋಜಿಸಿತ್ತು.

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಇದ್ರಲ್ಲಿ ಟೊಮೆಟೊ, ಹಾಗಲಕಾಯಿ, ಬೀನ್ಸ್, ಕ್ಯಾರೆಟ್, ಸೌತೆಕಾಯಿ ಹೀಗೆ 5 ಬಗೆಯ 750 ಗ್ರಾಂ ತರಕಾರಿಗಳು ಇದ್ದವು.

ಭಾರೀ ಆಸಕ್ತಿಯಿಂದ ಸ್ಪರ್ಧಿಸಿದ್ದ ಮಹಿಳೆಯರು ತರಕಾರಿ ತಿಂದು ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಅಂತಿಮವಾಗಿ 3 ಸುತ್ತಿನ ಸ್ಪರ್ಧೆ ನಡೆದು ಹೇಮಲತಾ ಅವರು ವಿಜೇತರಾದರು.

ಹಸಿ ತರಕಾರಿ ತಿನ್ನುವ ಸ್ಪರ್ಧೆಯು ಜನರಲ್ಲಿ ಹೊಸ ಬಗೆಯ ಅನುಭವವನ್ನು ನೀಡಿತ್ತು.

ಜನರಂತೂ ಮುಗಿಬಿದ್ದು ವೀಕ್ಷಿಸಿದರು. ನೆರೆದ ಜನರಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಲಾಯಿತು.