ಮತದಾನ ದಿನ ಫೋಟೋ ಕ್ಲಿಕ್ಕಿಸಿ; 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ!
ರಾಜ್ಯ ಚುನಾವಣಾ ಆಯೋಗವು ಮತದಾನದ ವಿಷಯವಾಗಿ ಛಾಯಾಚಿತ್ರ ಸ್ಪರ್ಧೆ ಹಮ್ಮಿಕೊಂಡಿದೆ.
ಲೋಕಸಭಾ ಚುನಾವಣೆ – 2024 ರ ಮತದಾನ ಕರ್ನಾಟಕ ರಾಜ್ಯದಲ್ಲಿ ಎಪ್ರಿಲ್ 26 ಮತ್ತು ಮೇ 7 ರಂದು ನಡೆಯಲಿದೆ.
ಮತದಾನ ದಿನದಂದು ವಿಶಿಷ್ಟ ವಸ್ತುವನ್ನು ಫೋಟೋದಲ್ಲಿ ಸೆರೆ ಹಿಡಿಯುವವರಿಗೆ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ನೀಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಪತ್ರಿಕಾ ಛಾಯಾಗ್ರಾಹಕರು ವಿವರಗಳನ್ನು ಇ-ಮೇಲ್ ಐಡಿ: mediacellceokarnataka@gmail.com ಸಲ್ಲಿಸುವುದು.
ಫೋಟೊಗಳನ್ನು ಸಲ್ಲಿಸಲು ಮೇ 15 ಕೊನೆಯ ದಿನವಾಗಿರುತ್ತದೆ.
ಅಂದು ಸಂಜೆ 5 ಗಂಟೆಯೊಳಗೆ ಇ-ಮೇಲ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ.
ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ, ತೃತೀಯಬಹುಮಾನ 10 ಸಾವಿರ.
ಹಾಗೂ ಸಮಾಧಾನಕರ ಬಹುಮಾನವಾಗಿ 6 ಸಾವಿರ ರೂಪಾಯಿ ಮತ್ತು ವಿಶೇಷ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ಸಿಗಲಿದೆ.