ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಸಾವಾಗಿದೆ ಎಂದು ಹೇಳಲಾಗಿದೆ.

ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು.

ಇವರ ಬಗ್ಗೆ ಹೆಚ್ಚಿನ ಪರಿಚಯ ಜನರಿಗೆ ಅಗತ್ಯವಿಲ್ಲ ಎನ್ನುವಷ್ಟು ಜನಪ್ರಿಯತೆ ಗಳಿಸಿದ್ದರು.

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನ್ನಡ ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

ನಟಿ ತಮ್ಮದೇ ಯುಟ್ಯೂಬ್ ಚಾನೆಲ್ ತೆರೆದು ಆ ಮೂಲಕವೂ ಹೆಚ್ಚಿನ ಜನರನ್ನು ತಲುಪಿದ್ದರು.

ಕನ್ನಡದ ರೋಬೋ ಫ್ಯಾಮಿಲಿ ಮೂಲಖ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ.

ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು.

ಮೊದಲು ಸಣ್ಣ ಸಣ್ಣ ಪಾತ್ರಗಳನ್ನು ಅಭಿನಯಿಸುತ್ತಾ ತಾರಾ ಲೋಕಕ್ಕೆ ಕಾಲಿಟ್ಟಿದ್ದರು.

ಈ ಅನಿರೀಕ್ಷಿತ ಸಾವಿನಿಂದ ಅವರ ಕುಟುಂಬದವರೂ ಸಹ ದುಃಖಿತರಾಗಿದ್ದಾರೆ

ಇಂದು ಮಂಡ್ಯದಲ್ಲಿ ಪವಿತ್ರ ಜಯರಾಂ ಅಂತ್ಯಕ್ರಿಯೆ