ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಇರುವ ಎತ್ತರದ ಕಟ್ಟಡ, ಮೊಬೈಲ್ ಟವರ್ಗಳಲ್ಲಿ ಈ ಮಿಂಚುಬಂಧಕವನ್ನು ನೋಡಲು ಸಾಧ್ಯವಿದೆ.
ಮಳೆಗಾಲದಲ್ಲಿ ಅತ್ಯಂತ ಪ್ರಖರವಾದ ಮಿಂಚು ಬಡಿಯೋದು ಸಾಮಾನ್ಯವಾಗಿದ್ದು,
ಈ ಮಿಂಚುಬಂಧಕಗಳು ಮಿಂಚಿನಿಂದ ಹೊರಸೂಸುವ ವಿದ್ಯುತ್ ಕಿರಣಗಳನ್ನು ಸೆರೆಹಿಡಿದು ಭೂಮಿಯ ಅಡಿಭಾಗಕ್ಕೆ ಕಳುಹಿಸುವ ಕೆಲಸವನ್ನು ಮಾಡುತ್ತದೆ.
ಕಟ್ಟಡ ಅಥವಾ ಟವರ್ಗಳಿಂದ ಕೊಂಚ ಎತ್ತರದಲ್ಲಿರುವ ಈ ಕಬ್ಬಿಣದ ರಾಡ್ ಮಿಂಚನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಮತ್ತು ರಾಡ್ನಲ್ಲಿ ಅಳವಡಿಸಲಾದ ತಂತಿಯ ಮೂಲಕ ವಿದ್ಯುತ್ತನ್ನು ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಭೂಮಿಯ ಅಡಿಭಾಗಕ್ಕೆ ಪಸರಿಸುತ್ತದೆ.
ಗ್ರಾಮೀಣ ಭಾಗದಲ್ಲಿ ಇಂಥ ಕಟ್ಟಡಗಳಾಗಲೀ, ಟವರ್ಗಳಾಗಲೀ ಇಲ್ಲದ ಕಾರಣ ಆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಡಿಲು ಬಡಿದು ಜನ ಮತ್ತು ಜಾನುವಾರುಗಳು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತದೆ.
ಅದರಲ್ಲೂ ಗುಡ್ಡ ಪ್ರದೇಶಗಳಲ್ಲಿ ಇರುವ ಮನೆಗಳ ಮೇಲೆ ಸಿಡಿಲು ಬಡಿದಿರುವ ಹಲವು ಉದಾಹರಣೆಗಳಿರುವ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳ ಜನ ಮಳೆಗಾಲ ಬಂತೆಂದರೆ ಮಿಂಚುಬಂಧಕದ ಬಗ್ಗೆ ಚರ್ಚೆ ಮಾಡಲು ಆರಂಭಿಸುತ್ತಾರೆ.
ಕಳೆದ ಹತ್ತು ವರ್ಷಗಳ ಅಂಕಿಅಂಶಗಳ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದವರ ಸಂಖ್ಯೆ 40ಕ್ಕಿಂತಲೂ ಹೆಚ್ಚಾಗಿದ್ದು,
ಗಾಯಗೊಂಡವರ ಸಂಖ್ಯೆ ಇದಕ್ಕಿಂತ ದುಪ್ಪಟ್ಟಾಗಿದೆ. ಅಲ್ಲದೆ ಸಿಡಿಲಿಗೆ ಮನೆ ಹಾನಿ, ಜಾನುವಾರುಗಳ ಸಾವು ಕೂಡಾ ಸಂಭವಿಸಿದ್ದು, ಮಿಂಚುಬಂಧಕದ ಅಳವಡಿಕೆಯಿಂದ ಈ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ಭರವಸೆ ಈ ಭಾಗದ ಜನರಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಯ್ಯೂರು, ಮುಂಡೂರು, ನೆಲ್ಯಾಡಿ, ಕೊಕ್ಕಡ, ಒಳಮೊಗ್ರು, ಆರ್ಯಾಪು, ನೆಟ್ಟಣಿಗೆ, ಮುಡ್ನೂರು, ಉಪ್ಪಿನಂಗಡಿ, ಶಿರಾಡಿ, ಕಬಕ, ಗೋಳಿತ್ತೊಟ್ಟು, ಕೊಣಾಜೆ ಇವುಗಳೆಲ್ಲವೂ ಸಿಡಿಲಿನ ಆಘಾತಕ್ಕೆ ಒಳಗಾಗುವ ಪ್ರಮುಖ ಗ್ರಾಮಗಳಾಗಿವೆ.
Belagavi News: ಅಗ್ರಣಿ ನದಿಗೆ ಬಿಟ್ಟ ನೀರಿನಿಂದ ಬೆಳಗಾವಿ ಗಡಿ ಮಂದಿಗೆ ಸಹಾಯ!