ಕಣ್ಣಿಗೆ ಬಟ್ಟೆ ಕಟ್ಟಿದ್ರೂ ಏನೆಲ್ಲ ಮಾಡ್ತಾರೆ ನೋಡಿ ಈ ಮಕ್ಕಳು!

ಕಲಬುರಗಿಯ ಚಿಂಚೋಳಿ ಪಟ್ಟಣದ ಡಾ. ವೀರೇಂದ್ರ ಪಾಟೀಲ್‌ ಶಾಲೆಯಲ್ಲಿ ಓದುತ್ತಿರುವ 4ನೇ ತರಗತಿಯ ಗುರುಪ್ರಸಾದ್‌, 5ನೇ ತರಗತಿಯ ಪ್ರಜ್ವಲ್‌ ಹಾಗೂ 7 ನೇ ತರಗತಿ ಬಾಲಕ ಪ್ರತೀಕ್‌ ಇಂತಹ ಅಪರೂಪದ ಸಾಧಕರು

ವಿಶೇಷ ಅಂದ್ರೆ ಈ ಮೂವರು ಒಂದೇ ಮನೆಯ ಕೂಡು ಕುಟುಂಬದ ಸದಸ್ಯರಾಗಿದ್ದು, ಇದರಲ್ಲಿ ಪ್ರಜ್ವಲ್‌ ಹಾಗೂ ಪ್ರತೀಕ್‌ ಸ್ವಂತ ಅಣ್ಣ ತಮ್ಮಂದಿರಾಗಿದ್ದಾರೆ

ಬಳ್ಳಾರಿಯ ಸಂಸ್ಥೆಯೊಂದರಲ್ಲಿ ಗಾಂಧಾರಿ ವಿದ್ಯೆ ಕಲಿತಿರುವ ಈ ಮಕ್ಕಳು ಇದೀಗ ತನ್ನ ಮುಂದೆ ಯಾವುದೇ ವಸ್ತುವಿದ್ರೂ ಅದರ ಬಣ್ಣ ಸಹಿತ ಹೇಳಬಲ್ಲರು

ಯಾವುದಾದರೂ ಕರೆನ್ಸಿ ನೋಟುಗಳನ್ನು ನೀಡಿದರೆ ಅದರ ಬೆಲೆ, ನೋಟ್ ನಲ್ಲಿರುವ ಮುದ್ರಿತವಾಗಿರುವ ಸೀರಿಯಲ್‌ ಸಂಖ್ಯೆಯನ್ನು ನಿಖರವಾಗಿ ಹೇಳಬಲ್ಲರು

ಜೊತೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಮೊಬೈಲ್‌ ಆಪರೇಟ್‌ ಮಾಡಬಲ್ಲ ಈ ಮಕ್ಕಳು, ಸೈಕ್ಲಿಂಗ್‌, ಕ್ಯಾರಂ ಆಟವನ್ನು ಯಾವುದೇ ಅಡೆತಡೆಯಿಲ್ಲದೇ ಆಡಬಲ್ಲರು

ಈ ಎಲ್ಲ ವಿದ್ಯೆಯನ್ನು ಈ ಮಕ್ಕಳು ಕೇವಲ ಹತ್ತು ದಿನಗಳ ತರಬೇತಿಯಲ್ಲಿ ಅಂದ್ರೆ ನೀವು ನಂಬ್ಲೇಬೇಕು

ಒಟ್ಟಿನಲ್ಲಿ ಏನಾದ್ರೂ ಸ್ಪೆಷಲ್‌ ಅನ್ನಬಹುದಾದ ವಿದ್ಯೆಯನ್ನು ಈ ಮೂವರು ಮಕ್ಕಳು ಕಲಿತು ಕರಗತ ಮಾಡಿಕೊಂಡಿರುವುದು ವಿಶೇಷವೇ ಸರಿ

ಮನುಷ್ಯ ಮನಸ್ಸು ಮಾಡಿದ್ರೆ ಎಂತಹ ಕಲೆಯನ್ನೂ ಕಲಿಯಬಲ್ಲ ಅನ್ನೋದಕ್ಕೆ ಈ ಮೂವರು ಮಕ್ಕಳು ಸಾಕ್ಷಿಯಾಗಿದ್ದಾರೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅದ್ಹೇಗೆ ನೋಡ್ತೀರಿ ಅಂತಾ ಕೇಳಿದ್ರೆ ಮೂರನೇ ಕಣ್ಣಿನಲ್ಲಿ ಅನ್ನೋ ಮೂಲಕ ಈ ಮಕ್ಕಳು ಅವರ ಮುಂದಿದ್ದವರನ್ನು ಬೇಸ್ತು ಬೀಳಿಸುವಂತೆ ಮಾಡುತ್ತಾರೆ