ಇಂದು ಟೀ ಡೇ! ಮನೆಯಲ್ಲಿ ಮಾಡಿ ಈ ಸ್ಪೆಷಲ್‌ ಟೀ

ಟೀ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ,ದಿನಕ್ಕೆ ಒಮ್ಮೆಯಾದರೂ ಕುಡಿಯಲೇ ಬೇಕು ಅಂತ ಅನಿಸುತ್ತೆ

ಇಂದು ವಿಶ್ವ ಚಹಾ ದಿನ, ಹೀಗಿರುವಾಗ ನಾವಿಂದು ಸ್ಪೆಷಲ್‌ ಟೀ ಟ್ರೈ ಮಾಡೋಣ

ಹರ್ಬಲ್‌ ಗ್ರೀನ್‌ ಟೀ ಅಂತ ನೀವು ಕೇಳಿರಬಹುದು

Filter Coffee: ದಕ್ಷಿಣ ಭಾರತದ ಜನರಿಗೆ ಫಿಲ್ಟರ್ ಕಾಫಿ ಬೇಕೇ ಬೇಕು! ಯಾಕೆ ಗೊತ್ತಾ?

ಇದನ್ನೂ ಮನೆಯಲ್ಲಿ ಈಸಿಯಾಗಿ ಮಾಡಬಹುದು

ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಹೀಗಿವೆ  ನೀರು-ಒಂದು ಗ್ಲಾಸ್‌ ಕಾಳು ಮೆಣಸಿನ ಪುಡಿ-ಒಂದು ಚಿಟಿಕೆ ಏಲಕ್ಕೆ ಪುಡಿ- ಒಂದು ಚಿಟಿಕೆ ಪುದೀನಾ ಎಲೆ-15 ರಿಂದ 20 ತುಳಸಿ ಎಲೆ- 15 ರಿಂದ 20 ನಿಂಬೆರಸ- ಒಂದು ಚಮಚ ಜೇನುತುಪ್ಪ ಅಥವಾ ಸಕ್ಕರೆ- ಒಂದು ಚಮಚ

ಇಷ್ಟು ರೆಡಿ ಮಾಡಿಕೊಂಡ ನಂತರ, ಟೀ ತಯಾರಿಸುವ ಪಾತ್ರೆಗೆ ಒಂದು ಕಪ್‌ ನೀರು ಹಾಕಿ ಕುದಿಸಿ 

ಬಳಿಕ 1 ಚಿಟಿಕೆ ಕಾಳು ಮೆಣಸಿನ ಪುಡಿ ಮತ್ತು 1 ಚಿಟಿಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿರಿ

ನಂತರ ಪುದೀನಾ ಎಲೆ ಹಾಗೂ ತುಳಸಿ ಎಲೆಗಳನ್ನು ಹಾಕಿ. ಪ್ಲೇಟ್‌ ಮುಚ್ಚಿರಿ

ಸಣ್ಣ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕಾಯಿಸಿಕೊಳ್ಳಿ

ನಂತರ ಒಲೆ ಮೇಲಿಂದ ಇಳಿಸಿ ನಿಂಬೆರಸ ಬೆರೆಸಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ ಹಾಕಿದ್ರೆ ಹರ್ಬಲ್‌ ಗ್ರೀನ್‌ ಟೀ ರೆಡಿ

Breakfast: ಅಕ್ಕಿ ನೆನೆಸೋದು ಬೇಡ, ರುಬ್ಬೋದೂ ಬೇಡ; ಮೊಸರು, ಅವಲಕ್ಕಿಯಲ್ಲಿ ರೆಡಿಯಾಗುತ್ತೆ ಮಲ್ಲಿಗೆಯಂತ ಇಡ್ಲಿ