ಈ ಎಗ್‌ ಮಸಾಲಾ ಮಾಡಿ! ಮನೆ ಮಂದಿ ಖುಷ್‌ ಆಗ್ತಾರೆ

ಮಹಿಳೆಯರಿಗೆ ಅಡುಗೆ ಮಾಡುವುದೇ ಒಂದು ತಲೆಬಿಸಿಯಾಗಿರುತ್ತೆ

ಅದರಲ್ಲೂ ಹೊಸ ಅಡುಗೆ ಏನು ಮಾಡೋದು ಅಂತ ಯೋಚಿಸುತ್ತಾರೆ

ಬನ್ನಿ ಹಾಗಾದ್ರೆ, ಸ್ಪೆಷಲ್ ಎಗ್‌ ಮಸಾಲಾ ಮಾಡೋಣ

ಮೊದಲಿಗೆ ಮೊಟ್ಟೆಯನ್ನು ಬೇಯಿಸಿ, ಅದರ ಸಿಪ್ಪೆಯನ್ನು ತೆಗೆಯಿರಿ ಮತ್ತು ಫೋಕ್ನಿಂದ ಮೊಟ್ಟೆಯನ್ನು ಚುಚ್ಚಿಕೊಳ್ಳಿ,

ಈಗ ಹಚ್ಚಿದ ಈರುಳ್ಳಿ ಮತ್ತು ಉಪ್ಪು ಸೇರಿಸಿಕೊಂಡು ಕಂದು ಬಣ್ಣ ಬರುವವರೆಹೆ ಹುರಿಯಿರಿ

ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹುರಿದುಕೊಳ್ಳಿ, ಹಾಗೆ ಟೊಮ್ಯಾಟೊ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಹುರಿಯಿರಿ

ನಂತರ ಮೆಣಸಿನ ಪುಡಿ, ಅರಶಿನ, ಗರಂ ಮಸಾಲಾ, ಸೇರಿಸಿಕೊಳ್ಳಿ

ಮಸಾಲಾ ಎಣ್ಣೆ ಬಿಡುವವರೆಗೆ ಫ್ರೈ ಮಾಡಿ, ಈಗ ಮೊಟ್ಟೆ, ಪುದೀನ, ಕೊತ್ತಂಬರಿ ಸೊಪ್ಪು ಹಾಕಿ

2 ನಿಮಿಷ ಫ್ರೈ ಮಾಡಿ, ಬಳಿಕ ಸ್ವಲ್ಪ ನೀರು ಹಾಕಿ ಕುದಿಸಿ, ಆಗ ಎಗ್‌ ಮಸಾಲಾ ರೆಡಿಯಾಗುತ್ತೆ

Breakfast Recipe: ಚಿಕನ್-ಮಟನ್ ಟೇಸ್ಟ್​ ನೀಡುತ್ತೆ ಹಲಸಿನಕಾಯಿ ಬಿರಿಯಾನಿ; ತಿಂದ್ರೆ ಫಿದಾ ಆಗ್ತೀರಿ!