ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕನಕನಹಳ್ಳಿಯಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆ

ಕನಕನಹಳ್ಳಿ ಸುತ್ತಮುತ್ತ ಜನರಿಗೆ ತೀವ್ರ ಆತಂಕವನ್ನು ಉಂಟುಮಾಡುತ್ತಿದ್ದ ಕಾಳಿಂಗ ಸರ್ಪ.

14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ ಮಾಡಲಾಯಿತು!

ಅರಬೈಲ್‌ನ ಉರಗ ತಜ್ಞ ಸೂರಜ್ ಶೆಟ್ಟಿ ಸರ್ಪವನ್ನು ಸೆರೆಹಿಡಿದರು

ಕಾಳಿಂಗ ಸರ್ಪವನ್ನು ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಯಿತು.

ಉರಗ ತಜ್ಞ ಕೇವಲ 10 ನಿಮಿಷದಲ್ಲಿ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

ಹಾವಿನ ಆರ್ಭಟಕ್ಕೆ ಜನ ಅಕ್ಷರಶಃ ಬೆಚ್ಚಿ ಬಿದ್ದು ಹಾವಿರುವ ಕಡೆಗೆ ಜಮಾಯಿಸಿಬಿಟ್ಟಿದ್ದಾರೆ.  

ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಇರುವುದರಿಂದ ಕಾಡು ಬಿಟ್ಟು ನಾಡಿಗೆ ಬಂದ ಕಾಳಿಂಗ

14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೂರಜ್ ಶೆಟ್ಟಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.