ದರ್ಶನ್ ಗೂ - ಪವಿತ್ರ ಗೌಡಗೂ ಸಂಬಂಧವೇನು?

ಪವಿತ್ರಾ ಗೌಡಗೆ ಇನ್ಸ್ಟಾಗ್ರಾಮ್ ನಲ್ಲಿ ಬ್ಯಾಡ್ ಮೆಸೇಜ್ ಹಾಕಿದ್ದಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ ನಟಿ ಕಮ್ ಮಾಡೆಲ್ ಹಾಗೂ ನಟ ದರ್ಶನ್ ಗೆಳತಿ ಪವಿತ್ರಾಗೌಡ

ಜಗ್ಗುದಾದ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಪವಿತ್ರಾಗೌಡ ದರ್ಶನ್ ಗೆ ಪರಿಚಯವಾಗಿದ್ದಾರೆ

ಪವಿತ್ರಾ ಕಳೆದ 10 ವರ್ಷಗಳಿಂದ ದರ್ಶನ್ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದಾರೆ.

ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೆ ಮುಂಚೆಯೇ ಪವಿತ್ರಾಗೌಡ ಸಂಜಯ್ ಸಿಂಗ್ ರನ್ನ ಪ್ರೀತಿಸಿ ಮದುವೆಯಾಗಿದ್ದಾರೆ.

ದರ್ಶನ್ ಹಾಗೂ ತನ್ನ ನಡುವಿನ 10 ವರ್ಷದ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದರು.

ನಟ ದರ್ಶನ್ ಸೇರಿ 10ಕ್ಕೂ ಹೆಚ್ಚು ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಹೆಸರು ಬಂದ ಹಿನ್ನೆಲೆ, ಪೊಲೀಸರು ಠಾಣೆಗೆ ಕರೆತಂದಿದ್ದಾರೆ.