ಹಸೆಮಣೆ ಏರಲು ರೆಡಿಯಾದ್ರು ನಟಿ ಸೋನಾಕ್ಷಿ ಸಿನ್ಹಾ!

ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಲಿದೆ.

ಬಹುದಿನಗಳ ಗೆಳಯನ ಜೊತೆ ಸೋನಾಕ್ಷಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಇಬ್ಬರು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ.

ಸೋನಾಕ್ಷಿ ಸಿನ್ಹಾ ಜೂನ್ 23 ರಂದು ಮುಂಬೈನಲ್ಲಿ ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ.

ಮ್ಯಾಗಜೀನ್ ರೀತಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಡಿಸೈನ್ ಮಾಡಲಾಗಿದೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ.

ಮದುವೆಗೆ ಬರುವ ಅತಿಥಿಗಳಿಗೆ ಫಾರ್ಮಲ್ಸ್ ಡ್ರೆಸ್ನಲ್ಲಿ ಬರುವಂತೆ ಸೂಚನೆ ನೀಡಲಾಗಿದೆ.

ಇತ್ತೀಚಿಗೆ ಸೋನಾಕ್ಷಿ ಸಿನ್ಹಾ ಅವರ ಜನ್ಮದಿನದಂದು ಜಹೀರ್ ಇಕ್ಬಾಲ್ ಲವ್ಲಿ ವಿಶ್ ಮಾಡಿದ್ರು.

ಸೋನಾಕ್ಷಿ ಅವರು ಬಿಹಾರದ ರಾಜಧಾನಿ ಪಾಟ್ನಾದಲ್ಲಿ 2 ಜೂನ್ 1987 ರಂದು ಜನಿಸಿದ್ರು.

ಮಧ್ಯರಾತ್ರಿ ಹೀಗೆಲ್ಲಾ ಮಾಡ್ತಾರಾ ನಯನತಾರಾ?