ಖರ್ಜೂರ ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಿದ ರೈತ

ಖರ್ಜೂರ ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಿದ ರೈತ

ಇತ್ತೀಚೆಗೆ ಬಹಳಷ್ಟು ರೈತರು ಸಾಂಪ್ರದಾಯಿಕ ಕೃಷಿಯಿಂದ ತೋಟಗಾರಿಕೆಯತ್ತ ಮುಖ ಮಾಡಿದ್ದಾರೆ

ಇಲ್ಲೊಬ್ಬ ರೈತ 2 ಎಕರೆ ಜಮೀನಿನಲ್ಲಿ ಇಸ್ರೇಲ್ ತಳಿ ಖರ್ಜೂರ ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸಿದ್ದಾರೆ 

ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಪ್ರೇಮಾಭಾಯಿ ಕಲಭಾಯಿ ಚೌಧುರಿ ಲಕ್ಷಗಟ್ಟಲೆ ಆದಾಯ ಗಳಿಸಿರುವ ರೈತ

ಇವರು2017ರಿಂದಲೂ ಇಸ್ರೇಲ್ ನ ಬರ್ಹಿ ತಳಿಯ ಖರ್ಜೂರ ಬೆಳೆಯುವ ಮೂಲಕ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ

ಪ್ರೇಮಾಭಾಯಿ ಚೌಧರಿ ಅವರು 22 ಬಿಘಾ (9 ಎಕರೆ) ಜಮೀನು ಹೊಂದಿದ್ದಾರೆ

ಖರ್ಜೂರವನ್ನು ತೋಟಗಾರಿಕಾ ಬೆಳೆಯಾಗಿ ಯಶಸ್ವಿಯಾಗಿ ಬೆಳೆದು ಈ ರೈತ ಉತ್ತಮ ಆದಾಯ ಗಳಿಸುತ್ತಿದ್ದಾರೆ 

ಚೌಧರಿ ಅವರ ಕುಟುಂಬವು ಹಲವು ವರ್ಷಗಳಿಂದ ಕೃಷಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ

ಕೃಷಿಯಲ್ಲಿ ಹೊಸದೇನಾದರು ಮಾಡಬೇಕು ಎಂಬ ಉದ್ದೇಶದಿಂದ ಚೌಧರಿ ತೋಟಗಾರಿಕೆಯತ್ತ ಮುಖ ಮಾಡಿದರು

ಚೌಧರಿ 2017ರಲ್ಲಿ ತಮ್ಮ 2 ಎಕರೆ ಹೊಲದಲ್ಲಿ 9 ಲಕ್ಷ ವೆಚ್ಚದಲ್ಲಿ ಖರ್ಜೂರವನ್ನು ಬೆಳೆಸಿದರು

ಇಸ್ರೇಲಿ ಖರ್ಜೂರದಿಂದ ಆರಂಭಿಕ ವರ್ಷಗಳಲ್ಲಿ ಒಂದೂವರೆ ಲಕ್ಷದಿಂದ 2 ಲಕ್ಷ ಗಳಿಸುತ್ತಿದ್ದರು

ಇದೀಗ 2022ರಲ್ಲಿ ಚೌಧರಿ ಅವರು ಏಳು ಲಕ್ಷ ಆದಾಯ ಪಡೆದಿದ್ದಾರೆ