ರಾಜ್ಯದಲ್ಲಿ ಒಂದು ಲೀಟರ್ ಹಾಲಿಗೆ 42 ರೂಪಾಯಿ, ಅದನ್ನು 44 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ.

ಹಾಲಿಗೆ ಮಾತ್ರ ಬೆಲೆ ಏರಿಕೆ ಆಗಲಿದ್ದು, ಮೊಸರು, ತುಪ್ಪ, ಬೆಲೆ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಲಿನ ಬೆಲೆ ಹೆಚ್ಚಳವಾದ ಮೊತ್ತಕ್ಕೆ KMF ಹೆಚ್ಚುವರಿ ಹಾಲವನ್ನು ನೀಡಲಿದೆ.

ಒಂದು ಲೀಟರ್ ಪ್ಯಾಕೆಟ್ ನಲ್ಲಿ 1000 ML ಹಾಲಿರುತ್ತದೆ, ಇದಕ್ಕೆ 42 ರೂಪಾಯಿ ಇತ್ತು.

ಆದರೆ ಈಗ 1000 ML ಪ್ಯಾಕೆಟ್ ಗೆ 50 ML ಹೆಚ್ಚು ಸೇರಿಸಿ 2 ರೂಪಾಯಿ ಏರಿಕೆ ಮಾಡಲಾಗಿದೆ.

ಪ್ರತಿ ಪ್ಯಾಕೆಟ್ ಹಾಲಿಗೂ 2 ರೂ ಏರಿಕೆ ಆಗಲಿದ್ದು, ಪ್ರತಿ ಪ್ಯಾಕೆಟ್ ಗೂ 50 ML ಹೆಚ್ಚುವರಿ ಸೇರಿಸಿ 2 ರೂಪಾಯಿ ಏರಿಕೆ ಮಾಡಲಾಗಿದೆ.

ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ, ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ

ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ, ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ

ಶುಭಂ ಹಾಲು 48ರಿಂದ 50 ರೂ, ಶುಭಂ (ಟೋನ್ಡ್ ಹಾಲು) 49 ರಿಂದ 51ರೂ

ಸಮೃದ್ದಿ ಹಾಲು 51ರಿಂದ 53ರೂ, ಸಂತೃಪ್ತಿ ಹಾಲು 55 ರಿಂದ 57 ರೂ

ಶುಭಂ ಗೋಲ್ಡ್ ಹಾಲು 49ರಿಂದ 51ರೂ, ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ