ಕಡೂರು ತಾಲೂಕಿನ ಸಖರಯಾಪಟ್ಟಣದ ನರೇಂದ್ರ ಅವರ ಎನ್.ಜಿ ಫ್ರೂಟ್ಸ್ ಕಂಪನಿಯಲ್ಲಿ ತಯಾರಾಗೋ ಚಿಪ್ಸ್‌ಗೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದಲ್ಲೂ ಭಾರೀ ಬೇಡಿಕೆಯಿದೆ

ದೊಡ್ಡ ದೊಡ್ಡ ಕಂಪೆನಿಗಳ ಆಲೂಗೆಡ್ಡೆ ಬನಾನ ಚಿಪ್ಸ್‌ಗಳಿಗೆ ಸವಾಲೊಡ್ಡುವಂತೆ ಎನ್‌.ಜಿ. ಫ್ರೂಟ್ಸ್‌ ಚಿಪ್ಸ್‌ ಭಾರೀ ಫೇಮಸ್‌ ಆಗಿದೆ

ಹೊರರಾಜ್ಯದಲ್ಲೂ ಇಲ್ಲಿನ ಹಲಸು ಚಿಪ್ಸ್‌ಗೆ ಭಾರೀ ಬೇಡಿಕೆ ಇದೆ

ಹಲಸಿನ ಸೀಸನ್‌ನಲ್ಲಿ ಇವರ ಬಳಿ 8-10 ಟನ್ ಗಳಷ್ಟು ಹಲಸಿನ ಚಿಪ್ಸ್ ಮಾರಾಟವಾಗುತ್ತೆ

ಅಲ್ಲದೆ ಇವರ ಹಲಸಿನ ಚಿಪ್ಸ್ ಅನ್ನು, ಬೆಂಗಳೂರಿನ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಜೊತಗೆ ಆನ್ಲೈನ್ ಆರ್ಡರ್ ಮೂಲಕ ಎನ್‌.ಜಿ. ಫ್ರೂಟ್ಸ್‌ನ ಹಲಸಿನ ಕಾಯಿ ಚಿಪ್ಸ್ ಸಿಗುತ್ತವೆ

ಮಲೆನಾಡಿನ ಮಡಿಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲಸಿನ ಉದ್ಯೋಗ ಸೃಷ್ಟಿ ಮಾಡಿ 4 ಜನಕ್ಕೆ ಕೆಲಸ ನೀಡುತ್ತಿರುವ ನರೇಂದ್ರ ಅವರ ಫ್ರೂಟ್ಸ್ ಕಂಪನಿಯಲ್ಲಿ ತಯಾರಾಗೋ ಹಲಸಿನ ಚಿಪ್ಸ್ ದೂರದ ಗುಜರಾತ್‌ವರೆಗೂ ಮಾರಾಟವಾಗುತ್ತೆ

ಹಲಸಿನ ಚಿಪ್ಸ್ ಎಪ್ರಿಲ್‌ನಿಂದ ಜೂನ್‌ವರೆಗೆ 8-10 ಟನ್ ಗುಜರಾತ್‌ಗೆ ಕಳಿಸುತ್ತಾರೆ

ಇದರಿಂದ ಇವರು ಸೀಸನ್‌ ಟೈಮ್ ಅಲ್ಲೇ 6-8 ಲಕ್ಷದವರೆಗೆ ಆದಾಯ ಕೂಡ ಗಳಿಸುತ್ತಾರೆ. ಸೀಸನ್‌ ಮುಗಿದ ಸಂದರ್ಭದಲ್ಲಿ 2-3 ಟನ್ ಅಷ್ಟು ಚಿಪ್ಸ್ ಅನ್ನು ಮಾರಾಟ ಮಾಡುತ್ತಾರೆ

ಏನ್ ಜಿ ಫ್ರೂಟ್ಸ್ ನಲ್ಲಿ ಸಿಗುವ ಚಿಪ್ಸ್ ಗೆ ಇಷ್ಟೊಂದು ಬೇಡಿಕೆ ಇರಲು ಕಾರಣ ಇವರು ತಯಾರು ಮಾಡುವ ರೀತಿ ಅಂತ ಹೇಳಿದ್ರೆ ತಪ್ಪಾಗಲ್ಲ

ಆಗ ತಾನೇ ಮರದಿಂದ ಇಳಿಸಿದ ಕಾಯಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ನರೇಂದ್ರ ಅವರು ಗುಣಮಟ್ಟದ ಕಾಯಿಯನ್ನು ಆಯ್ಕೆ ಮಾಡಿ, ಅದನ್ನು ನೀಟಾಗಿ ತೊಳೆದು, ಕಾಯಿ ಮತ್ತು ಬೀಜವನ್ನು ಬೇರ್ಪಡಿಸಿ ಹಲಸಿನ ತೊಳೆಯನ್ನು ಮಿಷನ್ ಅಲ್ಲಿ ಚಿಪ್ಸ್ ಆಕಾರದಲ್ಲಿ ಕತ್ತರಿಸಿ ಅದನ್ನು ಗುಣಮಟ್ಟದ ಎಣ್ಣೆಯಲ್ಲಿ ಕರಿದುಕೊಂಡು ಅದಕ್ಕೆ ಉಪ್ಪು, ಖಾರ ಬೆರೆಸಿ ಅದನ್ನು ಉತ್ತಮ ರೀತಿಯಲ್ಲಿ ಪ್ಯಾಕಿಂಗ್ ಮಾಡಿ ಕಳುಹಿಸುತ್ತಾರೆ. ಜೊತಗೆ ಇವರ ಬಳಿ, ಸಾಲ್ಟ್ ಚಿಪ್ಸ್, ಚಿಲ್ಲಿ ಚಿಪ್ಸ್ ಮತ್ತು ಮಸಾಲಾ ಜಾಕ್ ಫ್ರೂಟ್ ಚಿಪ್ಸ್ ದೊರೆಯುತ್ತದೆ

Red Alert: ರಾಜ್ಯದ ಈ ಜಿಲ್ಲೆಗೆ ಮೂರು ದಿನ ರೆಡ್ ಅಲರ್ಟ್ ಘೋಷಣೆ