ಟಿ20 ವಿಶ್ವಕಪ್ನಲ್ಲಿ ಐಸಿಸಿ ವಿಜೇತ ತಂಡಗಳಿಗೆ ನೀಡುವ ಬಹುಮಾನ ಮೊತ್ತದ ಬಗ್ಗೆ ಎಲ್ಲರಿಗೂ ಕುತೂಹಲ ಉಂಟು ಮಾಡಿದ್ದು,
ಫೈನಲ್ ತಲುಪಿದ ತಂಡಗಳಿಗೆ ಎಷ್ಟು ಕೋಟಿ ಹಣ ಕೊಟ್ಟಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ
ಈತನ್ಮಧ್ಯೆ ಬಹುಮಾನದ ಮೊತ್ತ ಪ್ರಕಟವಾಗಿದ್ದು, ಕುತೂಹಲಕಾರಿ ಸಂಗತಿ ಎಂದರೆ ಈ ರೋಚಕ ಗೆಲುವಿನ ನಂತರ ಟೀಂ ಇಂಡಿಯಾ ಶ್ರೀಮಂತವಾಗಿದೆ
ಇದೇ ವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೂ ಕೋಟ್ಯಂತರ ರೂಪಾಯಿ ಬಹುಮಾನ ಸಿಕ್ಕಿದೆ
ಅಂದ ಹಾಗೆ ಟಿ 20 ವಿಶ್ವಕಪ್ (ಟಿ 20 ವಿಶ್ವಕಪ್ 2024) ಗೆದ್ದ ನಂತರ ಭಾರತಕ್ಕೆ 2.45 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಸಿಕ್ಕಿದೆ
ಭಾರತೀಯ ರೂಪಾಯಿಯಲ್ಲಿ ಇದರ ಮೌಲ್ಯ ಸುಮಾರು 20.42 ಕೋಟಿ ರೂಪಾಯಿ. ಇದರ ಜೊತೆಗೆ ಟೀಂ ಇಂಡಿಯಾ ಟ್ರೋಫಿಯನ್ನೂ ಪಡೆದುಕೊಂಡಿದೆ
ಮತ್ತೊಂದೆಡೆ ಫೈನಲ್ನಲ್ಲಿ ಸೋಲಿನ ನಂತರವೂ ದಕ್ಷಿಣ ಆಫ್ರಿಕಾ ಶ್ರೀಮಂತವಾಗಿದೆ
ದಕ್ಷಿಣ ಆಫ್ರಿಕಾಕ್ಕೆ 1.28 ಮಿಲಿಯನ್ ಡಾಲರ್ ಬಹುಮಾನ ಸಿಕ್ಕಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 10.67 ಕೋಟಿ ರೂಪಾಯಿ
ಇದರ ಜೊತೆಗೆ ಸೂಪರ್ 8ರಲ್ಲಿ ಹೊರಬಿದ್ದ ತಂಡಕ್ಕೆ 3.8 ಕೋಟಿ ರೂಪಾಯಿ, ಒಂಬತ್ತರಿಂದ 12ನೇ ಸ್ಥಾನ ಪಡೆದ ತಂಡಗಳಿಗೆ 2.6 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ
ಫೈನಲ್ ಪಂದ್ಯದ ನಂತರ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಅವರಿಗೆ ಬಹುಮಾನವಾಗಿ 5000 ಡಾಲರ್ ನೀಡಲಾಯಿತು. ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 4,16,821 ರೂಪಾಯಿ
ಇತ್ತ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಆಟಗಾರರಾಗಿದ್ದು, ಅವರಿಗೆ 15000 ಡಾಲರ್ಗಳನ್ನು ಬಹುಮಾನವಾಗಿ ನೀಡಲಾಯಿತು. ಭಾರತೀಯ ರೂಪಾಯಿಗಳಲ್ಲಿ ಇದರ ಮೊತ್ತ ಸರಿಸುಮಾರು 12,50,465 ರೂಪಾಯಿ
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ತು ಬಂಪರ್ ಗಿಫ್ಟ್! BCCI ಘೋಷಿಸಿದ್ದು ಎಷ್ಟು ಕೋಟಿ ಗೊತ್ತಾ?