ರಾಘವೇಂದ್ರ ದ್ವಿಗಿ ಅಂದ್ರೆ ಈಗ ಎಲ್ಲರಿಗೂ ಗೊತ್ತು.

ಆದ್ರೆ ಅವರ ಶ್ರಮದ ಬಗ್ಗೆ ಕೆಲವರಿಗೆ ಗೊತ್ತಿಲ್ಲ.

ರಘು ಜೀವನದ ಅಸಲಿ ಕಥೆಯನ್ನು ನೀವು ತಿಳಿದುಕೊಳ್ಳಬೇಕು.

ಯಾಕಂದ್ರೆ ಛಲ ಇದ್ದವನು ಹೇಗೆ ಸಾಧನೆ ಮಾಡುತ್ತಾನೆ ಎಂಬುವುದಕ್ಕೆ ಈ ರಾಘವೇಂದ್ರ ದ್ವಿಗಿ ಕಥೆಯೇ ಸಾಕ್ಷಿಯಾಗುತ್ತೆ.

ರಘು ಅವರಿಗೆ ಕ್ರಿಕೆಟ್‌ ಅಂದ್ರೆ ಪ್ರಾಣ. ಆದ್ರೆ ಅವರ ತಂದೆಗೆ ಕ್ರಿಕೆಟ್‌ ಅಂದ್ರೆ ಆಗುತ್ತಿರಲಿಲ್ಲ.

ಒಂದು ದಿನ ರಘು ತಂದೆ ಹೀಗೆ ಕೇಳುತ್ತಾರಂತೆ. ನಿನಗೆ ಶಿಕ್ಷಣ ಮುಖ್ಯವೋ ಅಥವಾ ಕ್ರಿಕೆಟ್‌ ಮುಖ್ಯವೋ ಎಂದು

ಈ ಪ್ರಶ್ನೆಗೆ ರಘು ನೀಡಿದ್ದ ಉತ್ತರ ಏನು ಅಂದ್ರೆ ಕೈಯಲ್ಲಿ 21ರೂ ಹಿಡಿದು ಮನೆ ಬಿಟ್ಟದ್ದು.

ಕುಮುಟಾದ ಸ್ವಂತ ಮನೆ ಬಿಟ್ಟು ಹುಬ್ಬಳ್ಳಿಗೆ ಹೋಗುತ್ತಾರೆ, ಹಾಗೆ ಅಲ್ಲೇ ಇದ್ದ ಬಸ್ಸ್‌ ನಿಲ್ದಾಣದಲ್ಲಿ ಮಲಗುತ್ತಾರೆ.

ಅಲ್ಲಿಂದ ದೇವಸ್ಥಾನ, ನಂತ್ರ ಸ್ಮಶಾನದ ಜಾಗದಲ್ಲಿ ಪಾಳು ಬಿದ್ದ ಮನೆಯಲ್ಲಿ ನಾಲ್ಕೂವರೆ ವರ್ಷ ಕಳೆಯುತ್ತಾರೆ.

ಇದರ ನಡುವೆ ಅವರ ಬಲಗೈ ಮುರಿದು ಹೋಗಿರುತ್ತದೆ, ಕ್ರಿಕೆಟ್‌ ಆಡುವ ಕನಸು ನಚ್ಚುನೂರಾಗಿರುತ್ತದೆ.

ಆದ್ರೆ ಛಲ ಹಾಗೆ ಇರುತ್ತದೆ. ಈ ಕಾರಣದಿಂದ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ ಅವರ ಅಭ್ಯಾಸಕ್ಕೆ ಸಹಾಯ ಮಾಡುತ್ತಾರೆ.

ಅಲ್ಲಿ ಸಿಕ್ಕ ಗೆಳೆಯನೊಬ್ಬ ಬೆಂಗಳೂರಿಗೆ ದಾರಿ ತೋರಿಸುತ್ತಾರೆ, ಹೀಗೆ ಬೆಂಗಳೂರಿಗೆ ಬಂದವರು Karnataka Institute of Cricket. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಬೌಲಿಂಗ್ ಮಷಿನ್‌ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರ ಅವರ ಕೆಲಸವಾಗುತ್ತದೆ.

ಇದರ ಮಧ್ಯೆ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬಿದ್ದ ರಾಘವೇಂದ್ರನ ಕೆಲಸವನ್ನು ತಿಲಕ್ ನಾಯ್ಡು, ನೋಡುತ್ತಾರೆ ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯ ಮಾಡುತ್ತಾರೆ.

ಇದೇ ರಾಘವೇಂದ್ರನ ಬದುಕಿಗೆ ಸಿಕ್ಕ ದೊಡ್ಡ ಯೂ ಟರ್ನ್‌. ಶ್ರೀನಾಥ್‌ ಅವರು‘ಕರ್ನಾಟಕ ರಣಜಿ ತಂಡದ ಜೊತೆ ಇದ್ದು ಬಿಡು’ ಎಂದು ಕರೆ ತಂದು ಸೇರಿಸುತ್ತಾರೆ. 

ಈ ರೀತಿ 3-4 ವರ್ಷ ಒಂದು ರೂಪಾಯಿ ದುಡ್ಡು ತೆಗೆದುಕೊಳ್ಳದೆ ಕೆಲಸ ಮಾಡುತ್ತಾರೆ. 

ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸಿ ಬಿಡುತ್ತಾರೆ. ಹಾಗಾಗಿ  2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾರೆ.

ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘು ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ. 

ರಾಘವೇಂದ್ರನ ನಿರಂತರ ಶ್ರಮಕ್ಕೆ ಸಿಕ್ಕ ಉತ್ತರವೇ ಟಿ20 ವಿಶ್ವಕಪ್.