ಶಿರಸಿ ಭಾಗದ ಹೆಣ್ಣುಮಕ್ಕಳದ ಚೆಲುವಿಗೆ ಇದೊಂದು ಮಣಿ ಮುಕುಟದ ರೀತಿ ಹೇಳಿ ಮಾಡಿಸಿದ ಟೈಟಲ್ ಅಗಿದ್ದು,

ಈ ಭಾಗದ ಸುಂದರಿಯರು ವಿಶ್ವದೆಲ್ಲೆಡೆ ಮಿಂಚಲು ಚಿಮ್ಮುಹಲಗೆಯಾಗಿದೆ. 

ಶೃತಿ ಹೆಗಡೆ ಡಾಕ್ಟರ್ ಆಗಿ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ತಂದೆ ಕೃಷ್ಣ ಹೆಗಡೆಯವರೂ ಕೂಡ ಹುಬ್ಬಳಿಯಲ್ಲಿ ‘ಹೆಗಡೆ ಡಾಕ್ಟರು’ ಎಂದೇ ಜನಜನಿತ. 

ಇಂತಹ ವೈದ್ಯಕೀಯ ಕುಟುಂಬದಲ್ಲಿ ಹುಟ್ಟಿದರೂ ಇವರು ಸಕಲಕಲಾವಲ್ಲಭೆ.

ಅಪ್ರತಿಮ‌ ಚಿತ್ರ ಕಲಾವಿದೆಯೂ ಆದ ಶೃತಿ ಹೆಗಡೆ ಇವರು ಮಾಡಲಿಂಗ್ ಅಲ್ಲಿ ಕೂಡ ಮಿಂಚಿ ಈ ಹಿಂದೆ ಮಿಸ್ ಕರ್ನಾಟಕ 2018 ರ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ಟ್ಯಾಲೆಂಟೆಡ್ 2018, ಮಿಸ್ ಸೌತ್ ಇಂಡಿಯಾ 2018 ಟೈಟಲ್ ಮುಡಿಗೇರಿಸಿಕೊಂಡಿದ್ದರು.‌

ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಆಗಲು ಇವರ ಎತ್ತರ ಒಂದೇ ಸಮಸ್ಯೆ ಆದ್ದರಿಂದ ಇವರು ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ‘ಮಿಸ್ ಯೂನಿವರ್ಸಲ್ ಪೆಟೈಟ್‌’ ಎಂಬ 2009ರಲ್ಲಿ ಶುರುವಾದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಈ ವರ್ಷ ಪಾಲ್ಗೊಂಡಿದ್ದರು.

ಈ ಬಾರಿ ಸ್ಪರ್ಧೆಯಲ್ಲಿ 40 ದೇಶದ ಯುವತಿಯರು ಪಾಲ್ಗೊಂಡಿದ್ದರು.

 ಅಂತಹ ಕ್ಲಿಷ್ಟ ಹಾಗೂ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾದ ಡಾ. ಶೃತಿ ಹೆಗಡೆಯವರ ಶ್ರದ್ಧೆ, ಶ್ರಮವೇ ಸಾಧನೆಯ ಮಂತ್ರ ಎಂಬುದಕ್ಕೆ ನಿದರ್ಶನವಾಗಿದ್ದಾರೆ. 

ಕಥಕ್, ಭರತನಾಟ್ಯ, ವಯೋಲಿನ್, ಚಿತ್ರಕಲೆ, ಕ್ಯಾಲಿಗ್ರಾಫಿ ಹೀಗೆ ಎಲ್ಲದರಲ್ಲೂ ಮಿಂಚಿದ್ದ ಶೃತಿ ಕೃಷ್ಣ ಹೆಗಡೆ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ,

ಮನೆಯಲ್ಲೇ ಹಲಸಿನ ಹಣ್ಣಿನ ಮರಗಳನ್ನು ಬೆಳೆಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ