ಆಷಾಢ ಮಾಸವು ಹಿಂದೂ ಕ್ಯಾಲೆಂಡರ್‌ ಪ್ರಕಾರ 4ನೇ ತಿಂಗಳು.

ಹೆಚ್ಚಾಗಿ ದಕ್ಷಿಣ ಭಾರತ ಸೇರಿದಂತೆ ಕರ್ನಾಟಕದಲ್ಲಿ ಜನರು ಆಷಾಢ ಮಾಸದ ನಿಯಮಗಳನ್ನುಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. 

ಯಾಕೆಂದರೆ ಈ ಮಾಸವು ಅವರಿಗೆ ಹೆಚ್ಚು ಮಹತ್ವದ್ದಾಗಿರುತ್ತದೆ. ಆಷಾಢ ಮಾಸವನ್ನು ಶುಭಕಾರ್ಯಗಳನ್ನು ಮಾಡುವುದಕ್ಕೆ ಅಶುಭ ಮಾಸವೆಂದು ಪರಿಗಣಿಸಲಾಗುತ್ತದೆ. 

ಅದರಲ್ಲೂ ನವವಿವಾಹಿತರಿಗೆ ಹೆಚ್ಚು ಪ್ರಮುಖವಾಗಿರುತ್ತದೆ. ಶಾಸ್ತ್ರ ಪ್ರಕಾರ ಹೆಂಡತಿಯಾದವಳು ಗಂಡನ ಮನೆ ಬಿಟ್ಟು ತವರು ಮನೆ ಸೇರಬೇಕು.

ಇಲ್ಲವಾದಲ್ಲಿ ಮುಂದೆ ಕಷ್ಟ ಎದುರಿಸಬೇಕು ಎಂಬ ನಂಬಿಕೆ ಜನರಲ್ಲಿ ಇದೆ.

ಆಷಾಢ ಮಾಸದಲ್ಲಿ ನವವಿವಾಹಿತರು ಸಂಪೂರ್ಣವಾಗಿ ಪರಸ್ಪರ ದೂರವಿರುತ್ತಾರೆ. ದಂಪತಿಗೆ ಒಬ್ಬರನ್ನೊಬ್ಬರು ನೋಡಲು ಸಹ ಅನುಮತಿ ಇರುವುದಿಲ್ಲ. 

ಈ ಕಾರಣದಿಂದ ಪತ್ನಿಯನ್ನು ಆಕೆಯ ತವರು ಮನೆಗೆ ಕಳುಹಿಸಲಾಗುತ್ತದೆ.

ಗಂಡ ಹೆಂಡತಿ ದೂರ ಇಡಲು ಕಾರಣ ಈ ತಿಂಗಳಲ್ಲಿ ಒಟ್ಟಿಗೆ ಇದ್ದರೆ, ನಂತರ ಅವರು ಚೈತ್ರ ಮಾಸದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ.

ಅಂದ್ರೆ ಜುಲೈ ತಿಂಗಳಲ್ಲಿ ಒಟ್ಟಿಗೆ ಸೇರಿದರೆ ಚೈತ್ರಾ ಮಾಸ ಅಂದ್ರೆ ಮಾರ್ಚ್ ಏಪ್ರಿಲ್ ತಿಂಗಳಿಗೆ ಗರ್ಭಧಾರಣೆ ಆಗಿ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇರುತ್ತದೆ. 

ಆ ಸಮಯದಲ್ಲಿ ಬೇಸಿಗೆ ಬರುವುದರಿಂದ ಮಗುವಿನ ಪಾಲನೆ, ಬಾಣಂತಿಯ ಆರೈಕೆಯೂ ಕಷ್ಟವಾಗಲಿದೆ. ಈ ವೈಜ್ಞಾನಿಕ ಕಾರಣವೂ ಇದರ ಹಿಂದೆ ಅಡಕವಾಗಿದೆ.

ಜೀವನದಲ್ಲಿ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತೆ ಈ ಶ್ಲೋಕಗಳು