ಉತ್ತರ ಕನ್ನಡ: ‘ಕಲ್ಕಿ 2898 AD’ ಸಿನೆಮಾ ನೋಡಿದ ಬಳಿಕ ಜನರಲ್ಲಿ ಪುರಾಣದ ಕಲ್ಕಿ ಕುರಿತ ಕುತೂಹಲ ಅಧಿಕವಾಗಿದೆ. 

ಕಲಿಯುಗದ ಅಂತ್ಯಕ್ಕೆ ನಿಜಕ್ಕೂ ಕಲ್ಕಿ ಬರ್ತಾನ? ಹಾಗಿದ್ರೆ ಯಾರಿದು ಕಲ್ಕಿ? ಎಲ್ಲೆಲ್ಲ ಕಲ್ಕಿ ಕುರಿತು ಉಲ್ಲೇಖಗಳಿವೆ? 

ಇತಿಹಾಸಕಾರರೂ ಕಲ್ಕಿ ಬಗ್ಗೆ ಬರೆದಿದ್ದೇನು? ಏನನ್ನುತ್ತೆ ಪುರಾಣದ ಕಥೆಗಳು ಅನ್ನೋದನ್ನ ಸಿನೆಮಾ, ಪುರಾಣ ಹಾಗೂ ಇತಿಹಾಸ ಕುರಿತ ಉಲ್ಲೇಖಗಳ ಮೂಲಕ ಶಿರಸಿ ಮೂಲದ ಸಂಸ್ಕೃತ ವಿದ್ವಾಂಸ, ಲೇಖಕರೂ ಆಗಿರುವ ನಚಿಕೇತ್ ಹೆಗಡೆಯವರು ಈ ಎಲ್ಲ ವಿಷಯಗಳ ‘ಲೋಕಲ್‌ 18’ಗೆ ಮಾಹಿತಿ ನೀಡಿದ್ದಾರೆ.

ಕಲ್ಕಿಯ ಉಲ್ಲೇಖ ಬರುವುದು ಮಹಾಭಾರತ ಹಾಗೂ ಭಾಗವತದಲ್ಲಿ, ಅವನಿಗಾಗಿಯೇ ಕಲ್ಕಿ ಪುರಾಣ ಎಂಬ ಪುರಾಣವನ್ನು ವೇದವ್ಯಾಸರು ರಚಿಸಿದ್ದಾರೆ ಎಂಬ ಪ್ರತೀತಿ ಇದೆ. 

ಐತಿಹಾಸಿಕವಾಗಿ ಗಮನಿಸಿದಾಗ ಇದೊಂದು 16-17 ನೇ ಶತಮಾನದಲ್ಲಿ ರಚಿಸಲಾದ ಕೃತಿ ಎನ್ನುವುದನ್ನು ಎಡ್ವಿನ್ ಬೆರ್ನ್‌ಬಮ್ ಎಂಬುವವರು ಊಹಿಸಿದ್ದಾರೆ. 

ಅದಕ್ಕೆ ಪೂರಕವಾಗಿ 1726ರಲ್ಲಿ ಢಾಕಾದಲ್ಲಿ ಕಲ್ಕಿ ಪುರಾಣದ ಹಸ್ತಪ್ರತಿಗಳು ದೊರಕಿದ್ದವು. 

ಇನ್ನೂ ಎಡ್ವಿನ್ ಬೆನ್‌ಬರ್ಮ್ ಬರೆದ “ವೇ ಟು ಶಂಬಲಾ” ಎಂಬ ಪುಸ್ತಕ ಕಲ್ಕಿಯ ಹುಟ್ಟೂರಿನ ಬಗ್ಗೆ ವಿಸ್ತೃತವಾಗಿ ಹೇಳಲಾಗಿದೆ.

ಶಂಬಲಾ ಗ್ರಾಮ ಹಿಂದೂಗಳಿಗಿಂತ ಟಿಬೇಟಿಯನ್ ಬೌದ್ಧರು ಜಾಸ್ತಿ ನಂಬುವ ಗ್ರಾಮ! ಆ ಊರು ಉತ್ತರದಲ್ಲಿರುವ ಒಂದು ಗುಪ್ತ ಪ್ರದೇಶ. ಮಂಜಿನಿಂದ ಕೂಡಿದ ಆ ಪ್ರದೇಶ ಹೊರ ಜಗತ್ತಿಗೆ ತಿಳಿದಿಲ್ಲ.

 ಹಿಂದೂ ಪುರಾಣ ನಂಬಿಕೆ ಪ್ರಕಾರ ಕಲ್ಕಿ ಆಗಮನದ ಬಳಿಕ ಈ ಗ್ರಾಮದ ಮಂಜು ಕರಗುತ್ತದೆ.

ಇನ್ನು ಟಿಬೇಟಿಯನ್ ಬೌದ್ಧರು ನಂಬುವ ಪ್ರಕಾರ ದುಷ್ಟರು ಹೆಚ್ಚಾದಾಗ ಹಾಗೆಯೇ ಅಕಾಲ ಮರಣ, ದ್ವೇಷ, ಧರ್ಮದ್ರೋಹ, ಕ್ರೌರ್ಯ ಮಿತಿಮೀರಿದಾಗ ಶಂಬಲಾದ ಮಂಜು ಕರಗುತ್ತದೆ.

ನಂತರದಲ್ಲಿ ಶಂಬಲಾದಲ್ಲಿ ರುದ್ರಚಕ್ರಿಯನ್ ಎಂಬ ರಾಜ ಆ ದುಷ್ಟರನ್ನೆಲ್ಲಾ ಕೊಂದು ಜಗತ್ತಿಗೆ ಶಾಂತಿ ತರುತ್ತಾನೆ ಎನ್ನುವುದು ನಂಬಿಕೆ ಇದೆ.

ಧರ್ಮ ಪುನರ್ ಸ್ಥಾಪನೆಯ ಕಲ್ಯಾಣ ಕಾರ್ಯಕ್ಕೆ ಕಾರಣನಾಗಿ ಭೂಮಂಡಲವನ್ನು ಆಳುತ್ತಾನೆ. ನಂತರ ಕಾಲಚಕ್ರದ ಪ್ರಕಾರ ಕೃತಯುಗ ಬರುವ ವೇಳೆಯಲ್ಲಿ ಕಲಿಯುಗದ ಅಂತ್ಯಕ್ಕೆ ಈತ ಪುನಃ ವೈಕುಂಠಕ್ಕೆ ತೆರಳುತ್ತಾನೆ. 

ಬೆಳಗಾವಿಯ ನೂರಾರು ರೈತರಿಂದ 350 ಕಿ.ಮೀ. ದೂರದ ಪಂಢರಪುರಕ್ಕೆ ಪಾದಯಾತ್ರೆ!