ಅನಂತ್ ಅಂಬಾನಿ ಮದ್ವೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ದಂಪತಿ

ಯಶ್ ಮುಂಬೈಗೆ ಬಂದಿಳಿದ ವೇಳೆ ‘ಟಾಕ್ಸಿಕ್’ ಚಿತ್ರದ ಲುಕ್ ರಿವೀಲ್ ಆಗಿದೆ.

‘ಕೆಜಿಎಫ್ 2’ ನಂತರ ನಟ ಯಶ್ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಮುಖೇಶ್ ಅಂಬಾನಿ ಪುತ್ರನ ಮದುವೆಗೆ ಯಶ್‌ಗೂ ಆಹ್ವಾನ ಬಂದಿತ್ತು.

ಹಾಗಾಗಿ ಯಶ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಭಾಗಿಯಾಗಿದ್ದರು.

ಸೂಟ್ ಧರಿಸಿ ರಾಧಿಕಾ ಅವರೊಂದಿಗೆ ಯಶ್ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ.

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನೆರವೇರಿತು.

ಅನಂತ್ ಅಂಬಾನಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದರು.

ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ನಡೆದ ಈ ಶ್ರೀಮಂತ ವಿವಾಹಕ್ಕೆ ದೇಶ-ವಿದೇಶ ಗಣ್ಯರು ಸಾಕ್ಷಿಯಾದ್ರು.

ರಾಜಕಾರಣಿಗಳು, ಬಾಲಿವುಡ್ ನಟ-ನಟಿಯರು ವಿವಾಹಕ್ಕೆ ಸಾಕ್ಷಿಯಾಗಿದ್ದರು.