ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್!

ಬಾಲಿವುಡ್‌ ಬ್ಯೂಟಿ ಕತ್ರಿನಾ ಕೈಫ್ ಕೂಡ ಕೊರಗಜ್ಜನ ಸನ್ನಿಧಿಗೆ ಬಂದು ಆಶೀರ್ವಾದ ಪಡೆದಿದ್ದಾರೆ.

ಜನ್ಮದಿನಕ್ಕೆ ಒಂದು ದಿನ ಮುಂಚಿತವಾಗಿ ಕತ್ರಿನಾ ಕೈಫ್‌ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.

ಕತ್ರಿನಾ ಕೈಫ್‌ ತಮ್ಮ ಪತಿ ವಿಕ್ಕಿ ಕೌಶಾಲ್ ಜೊತೆ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ

ಜುಲೈ 16 ಕತ್ರಿನಾ ಕೈಫ್‌ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಕತ್ರಿನಾ ಕೈಫ್ ಹುಟ್ಟು ಹಬ್ಬಕ್ಕೆ ಮುಂಚಿತವಾಗಿ ವಿಶೇಷವಾಗಿ ಕೊರಗಜ್ಜ ದೈವದ ದರ್ಶನ ಪಡೆದಿದ್ದಾರೆ.

ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಹೆಸರನ್ನು ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು.

ಹೀಗಾಗಿ ಕೋಲ ನಡೆಯುವ ವೇಳೆ ಕತ್ರಿನಾ ಕೈಫ್‌ ವಿಕ್ಕಿ ಕೌಶಲ್ ಕೋಲದಲ್ಲಿ ಭಾಗಿಯಾಗಿದ್ದಾರೆ.

ತುಳುನಾಡಿನ ದೈವಗಳ ಶಕ್ತಿಯ ಬಗ್ಗೆ ದೇಶಾದ್ಯಂತ ಈಗ ಸುದ್ದಿ ಹರಿದಾಡುತ್ತಿದೆ.

ಕೊರಗಜ್ಜನ ಮೂಲಸ್ಥಾನವನ್ನು ಹುಡುಕಿಕೊಂಡು ದಿಗ್ಗಜರು ಬರುತ್ತಿದ್ದಾರೆ.