ಇಲ್ಲಿದೆ ನೋಡಿ ಪಾಂಡ್ಯ -ನತಾಶ ಡಿವೋರ್ಸ್‌ಗೆ ಅಸಲಿ ಕಾರಣ.

ಹಾರ್ದಿಕ್‌ ಪಾಂಡ್ಯ - ನತಾಶಾ ದೂರವಾಗ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡಿತ್ತು.

ಕೊನೆಗೂ ಹಾರ್ದಿಕ್ ಪಾಂಡ್ಯ ಮೌನ ಮುರಿದಿದ್ದಾರೆ. ಡಿವೋರ್ಸ್ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಹಾರ್ದಿಕ್‌ ಪಾಂಡ್ಯ ಇನ್‌‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

4 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ನತಾಶಾ ಮತ್ತು ನಾನು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ.

ನಾವು ಸಂಬಂಧವನ್ನು ಉಳಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಸಾಧ್ಯವಾದದ್ದೆಲ್ಲವನ್ನೂ ನೀಡಿದ್ದೆವು.

ಒಟ್ಟಾಗಿರಲು ನಮ್ಮಿಬ್ಬರಿಗೂ ಸಾಧ್ಯವಾಗದ ಕಾರಣ ಬೇರೆಯಾಗುವುದೇ ಸರಿಯಾದ ನಿರ್ಧಾರ ಎಂದು ನಮಗೆ ಅನಿಸುತ್ತಿದೆ.

ಒಟ್ಟಿಗೆ ಕಳೆದ ಸಂತೋಷದ ಕ್ಷಣಗಳು, ಕಳೆದ ದಿನಗಳನ್ನು ಆನಂದಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ತನ್ನ ಮಗ ಅಗಸ್ತ್ಯನನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ಹಾರ್ದಿಕ್ ಹೇಳಿದ್ದಾರೆ.

ನಮ್ಮ ಜೀವನದಲ್ಲಿ ಅಗಸ್ತ್ಯನನ್ನ ಪಡೆದಿರುವುದಕ್ಕೆ ನಾವು ಅದೃಷ್ಟವಂತರು. ನಾವಿಬ್ಬರೂ ಸೇರಿ ಅವನನ್ನು ನೋಡಿಕೊಳ್ಳುತ್ತೇವೆ.