ಭೂಕುಸಿತಕ್ಕೆ ಪ್ರಮುಖ ಕಾರಣ ಇದುವೇ ಅಂತಿದ್ದಾರೆ ತಜ್ಞರು!
ಡಾ. ಜಿ ಎಸ್ ಶ್ರೀನಿವಾಸ್ ರೆಡ್ಡಿ ಪ್ರಕಾರ ಶೇಕಡಾ 30ರಷ್ಟು ಮಾತ್ರ ಭೂಕುಸಿತಗಳು ನೈಸರ್ಗಿಕವಾಗಿ ನಡೆಯುತ್ತದೆ.
ಉಳಿದಂತೆ 70% ರಷ್ಟು ಭೂಕುಸಿತಗಳು ನಡೆಯುವುದು ಮಾನವನ ಹಸ್ತಕ್ಷೇಪದಿಂದಾಗಿದೆ.
ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಡುವ ಕೆಲವು ತಪ್ಪುಗಳು ಮಳೆಗಾಲದಲ್ಲಿ ಭೂಮಿ ಬಾಯಿಬಿಡುವಂತೆ ಮಾಡುತ್ತದೆ.
ಇನ್ನೊಂದು ಕಾರಣ ನದಿಯ ಪಕ್ಕದಲ್ಲಿ ಅದರ ಹರಿವು ಹೆಚ್ಚಾದಾಗ ಕೊರೆತ ಉಂಟಾಗಿ ಭೂ ಕುಸಿತ ಉಂಟಾಗಬಹುದು. ಹೀಗೆ ಭೂಕುಸಿತಕ್ಕೆ ನೈಸರ್ಗಿಕ ಕಾರಣ 20-30% ರಷ್ಟು ಮಾತ್ರ! ಎಂದರೆ ನೀವು ನಂಬಲೇಬೇಕು.
ಅಭಿವೃದ್ಧಿ ಕಾರ್ಯಗಳಲ್ಲಿ ಇಳಿಜಾರನ್ನು ಸಮತಟ್ಟಾಗಿಸಲು 0-45% ರಷ್ಟು ʼಸ್ಲೋಪ್ ಕಟ್ʼ ಮಾಡಬಹುದು. ಆದರೆ 70, 80, 90% ಗುಡ್ಡ ಕಡಿದಾಗ, ಗುಡ್ಡಕ್ಕೆ ಆಧಾರವಾದ “Toe area” ನಷ್ಟವಾಗುತ್ತದೆ.
ಹೆಚ್ಚು ರಸ್ತೆ ಅಗಲೀಕರಣ ಮಾಡಿದಷ್ಟು “toe area” ಎಂಬ ಬೆಟ್ಟದ ಆಧಾರ ನಷ್ಟವಾಗುತ್ತಾ ಹೋದಂತೆ ಸವಕಳಿ ಪ್ರಮಾಣ ಹೆಚ್ಚುತ್ತದೆ ಗುಡ್ಡಗಳು ಕುಸಿಯಲು ಇದೇ ಮುಖ್ಯಕಾರಣ ಇಳಿಜಾರು ಪ್ರದೇಶವನ್ನು ಮನೆ ಹಾಗೂ ಇನ್ನಿತರ ಕಟ್ಟಡ, ಸ್ಥಾವರ ನಿರ್ಮಾಣದ ಜಾಗಕ್ಕಾಗಿ ಕದಲಿಸುತ್ತಾ ಹೋದರೆ ಮೇಲುಗಡೆಯ ಮಣ್ಣಿನ ಭಾರ ತಡಿಯದೇ ಧರೆ ಕುಸಿಯುತ್ತದೆ
ನೀರು ಹರಿದು ಹೋಗಲು ಸರಿಯಾದ ಡ್ರೈನೇಜ್ ಸಿಸ್ಟಮ್ ಅನ್ನು ಗುಡ್ಡದ ಪಕ್ಕದಲ್ಲಿ ರಸ್ತೆ ಮಾಡುವಾಗ ಅಥವಾ ಕಟ್ಟಡ ಮಾಡುವಾಗ ಮಾಡದೇ ಇದ್ದರೆ ನೀರು ಮಣ್ಣೊಳಗೆ ಸೇರಿ ಇನ್ ಫಿಲ್ಟ್ರೇಟ್ ಆಗಿ ಭೂಮಿಯೊಳಗೆ ಇಳಿದ ನೀರು ಗ್ರೀಸ್ ತರಹ ವರ್ತಿಸಿ ಭೂ ಕುಸಿತಕ್ಕೆ ಕಾರಣವಾಗುತ್ತದೆ. ಇವಿಷ್ಟೂ ಕೂಡ ಭೂ ಕುಸಿತದ ಕಾರಣಗಳು ಎಂದು ತಜ್ಞರು ಹೇಳಿದ್ದಾರೆ.
ಯಶವಂತಪುರದಿಂದ ಮಂಗಳೂರಿಗೆ ವಿಶೇಷ ರೈಲು ಘೋಷಣೆ