ಮಂಡಲ ಆರ್ಟ್‌ನಲ್ಲಿ ಈ ಐಟಿ ಉದ್ಯೋಗಿ ಗಳಿಸ್ತಾರೆ ಲಕ್ಷ ರೂಪಾಯಿ!

ಇವರು ಉತ್ತರ ಕನ್ನಡ ಹಾಗೂ ಶಿವಮೊಗ್ಗದ ಪ್ರಮುಖ ಚಿತ್ರಪ್ರಕಾರಗಳಾದ ಹಸೆ, ವರ್ಲಿ, ಖಾವಿಯ ಕಲಾವಿದೆಯಲ್ಲದೇ ಮಂಡಲ ಚಿತ್ರಕಲೆಯ ಶಿಕ್ಷಕಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕಾರ್ಯಕ್ಷಮತೆಯನ್ನು ತೋರುತ್ತಿದ್ದಾರೆ.

ಇದನ್ನೆಲ್ಲಾ ಅವರು ಯುಟ್ಯೂಬ್ ನೋಡಿ ಕಲಿತಿದ್ದು! ಅವರಿಗೆ ಅವರೇ ಗುರು ಆದರೆ ಈಗ ಅವರ ಬಳಿ ನೂರಾರು ವಿದ್ಯಾರ್ಥಿಗಳು ಶಿಬಿರಗಳ ಮೂಲಕ ಮತ್ತು ಆನ್ ಲೈನ್ ಮೂಲಕ ಮಂಡಲ ಆರ್ಟ್ ನ ಶಿಕ್ಷಣ ಪಡೆಯುತ್ತಿದ್ದಾರೆ. 

ಮಂಡಲ ಆರ್ಟ್ ನಲ್ಲಿ ವಾಲ್ ಫ್ರೇ್, ಕೀ ಚೈನ್, ಕಾಫಿ ಕಪ್, ಬ್ಯಾಗ್, ಟೀ ಶರ್ಟ್, ವೆಡ್ಡಿಂಗ್ ಕಾರ್ಡ್, ಬೋರ್ಡಿಂಗ್, ಬುಕ್ ಲೇಬಲ್, ಕ್ಯಾಲೆಂಡರ್, ಮಂಡಲ ವಾಲಾರ್ಟ್ ಹೀಗೆ ಏನುಂಟು ಏನಿಲ್ಲ!

ಇಡೀ ಮನೆಯನ್ನು ರಂಗು ರಂಗಾಸಿಲು ಏನೇನು ಬೇಕೋ ಅದೆಲ್ಲಾ ಇವರ ಮಂಡಲ ಆರ್ಟ್ ನಲ್ಲಿ ಮೈದಳೆಯುತ್ತದೆ. 

ಒಂದು ರೀತಿಯಲ್ಲಿ ಮಂಡಲದ ಮೂಲಕ ಭೂ ಮಂಡಲದ ಎಲ್ಲವನ್ನೂ ತದ್ರೂಪವಾಗಿ ಚಿತ್ರಿಸುವ ನೈಪುಣ್ಯ ಇವರಿಗೆ ಸಿದ್ಧವಾಗಿದೆ‌. ಮದುವೆ ಮನೆಗಳಿಗೆ ಹಸೆ ಗೋಡೆ ಬರೆದುಕೊಡುವುದಕ್ಕೆ ಇವರು ಸಾಕಷ್ಟು ಜನರಿಂದ ಗುರುತಿಸಿಕೊಳ್ಳುತ್ತಾರೆ.

38 ವರ್ಷ ವಯಸ್ಸಿನ ಇವರು ವಾರ್ಷಿಕವಾಗಿ ತಮ್ಮ ಕಲೆಯ ಮೂಲಕ 40,000-1,00,000 ವರೆಗೆ ಆದಾಯ ಗಳಿಸುತ್ತಾರೆ. ಈಗಾಗಲೇ ಇವರ ನೂರಕ್ಕೂ ಹೆಚ್ಚು ಪ್ರಾಡಕ್ಟ್ ಗಳು ಅಮೇರಿಕಾ, ಕೆನಡಾ ,ದುಬೈ, ಅರಬ್ ದೇಶಗಳಿಗೆ ಸೇಲ್ ಆಗಿವೆ‌.

ಅಲ್ಲದೇ ಮಹಾರಾಷ್ಟ್ರ, ಹೈದರಾಬಾದ್, ಬೆಂಗಳೂರಿನಂತಹ ಮಹಾನಗರದಲ್ಲಿ ಇವರು ಖಾಯಂ ಗ್ರಾಹಕರನ್ನೂ ಹೊಂದಿದ್ದಾರೆ‌.

ಚಿತ್ರಸಂತೆಯಲ್ಲಿ ಪ್ರತೀ ವರ್ಷ ಇವರ ಕುಂಚಗಾರಿಕೆಯ ವಸ್ತುಗಳಿಗೆ ಬೇಡಿಕೆಯಿದೆ. ತಮ್ಮ ವೃತ್ತಿ ಜೀವನ ಹಾಗೂ ಸಾಂಸಾರಿಕ ಜೀವನದ ನಡುವೆ ಸಮಯ ಮಾಡಿಕೊಂಡು ಈ ಕಲೆಗಳನ್ನು ಯಾವುದೇ ಗುರುವಿಲ್ಲದೇ ಕಲಿತವರು ಈಗ ಮಂಡಲ ಆರ್ಟ್ ನ ಗುರುವಾಗಿದ್ದು ಅಚ್ಚರಿ ಸಂಗತಿ!

6 ನಿಮಿಷದಲ್ಲಿ 6 ಕಿಲೋ ಮೀಟರ್ ಕ್ರಮಿಸಿ ವಿದ್ಯಾರ್ಥಿನಿಯ ಜೀವ ರಕ್ಷಿಸಿದ ಬಸ್ ಡ್ರೈವರ್!