Rashmika Mandanna ರಿಜೆಕ್ಟ್ ಮಾಡಿದ ಸಿನಿಮಾಗಳಿವು

ಸ್ಯಾಂಡಲ್‍ವುಡ್‍ನಲ್ಲಿ ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಮಂದಣ್ಣ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ರು

ಟಾಲಿವುಡ್‍ನ 'ಆಚಾರ್ಯ' ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಅವರನ್ನು ಕೇಳಲಾಗಿತ್ತಂತೆ. ರಶ್ಮಿಕಾ ಬ್ಯುಸಿ ಇದ್ದ ಕಾರಣ ಈ ಸಿನಿಮಾ ಮಾಡಲು ಒಪ್ಪಲಿಲ್ಲ

ತಮಿಳಿನ ‘ಮಾಸ್ಟರ್’ ಸಿನಿಮಾ ಆಫರ್ ಕೂಡಾ ಬಂದಿತ್ತು, ಆದ್ರೆ ಆ ಪಾತ್ರವನ್ನೂ ರಶ್ಮಿಕಾ ಒಪ್ಪಲಿಲ್ಲ

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ವಿಜಯ್ ಅವರ ಇತ್ತೀಚಿನ ಚಿತ್ರ 'ಬೀಸ್ಟ್'ದಲ್ಲಿ ನಾಯಕಿ ಪಾತ್ರಕ್ಕಾಗಿ ರಶ್ಮಿಕಾ ಅವರನ್ನು ಮೊದಲು ಸಂಪರ್ಕಿಸಲಾಯಿತು

ತೆಲುಗಿನ 'ಅಂಟೆ ಸುಂದರಾನಿಕಿ' ಚಿತ್ರದಲ್ಲಿ ರಶ್ಮಿಕಾ ಅವರನ್ನು ನಾಯಕಿ ಎಂದು ಭಾವಿಸಲಾಗಿತ್ತು

ರಾಮ್ ಚರಣ್ ಮತ್ತು ಶಂಕರ್ ಕಾಂಬಿನೇಷನ್‍ನಲ್ಲಿ ತಯಾರಾಗುತ್ತಿರುವ RC 15 ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಅವರನ್ನು ಮೊದಲು ಸಂಪರ್ಕಿಸಲಾಗಿತ್ತು

ಆದರೆ ಅವರ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಕಿಯಾರಾ ಅಡ್ವಾಣಿ ಅವರನ್ನು ತೆಗೆದುಕೊಳ್ಳಲಾಗಿದೆ

ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಹಲವು ಬಾಲಿವುಡ್ ಪ್ರಾಜೆಕ್ಟ್ ಗಳಿಗೆ ರಶ್ಮಿಕಾ ಮಂದಣ್ಣ ನೋ ಹೇಳಿದ್ದಾರೆ ಎಂದು ವರದಿಯಾಗಿದೆ

ಒಟ್ಟಿನಲ್ಲಿ ರಶ್ಮಿಕಾ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಾಯಕಿಯಾಗಿ ನಟಿಸುತ್ತಾರೆ