ಈ ಬಾಲಿವುಡ್ ನಟಿ ಸದ್ಯ ಶ್ರೀಮಂತ ಯುವಕನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

ನಟಿ ಶೀಘ್ರದಲ್ಲೇ ಹಸಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.

ಕೃತಿ ಸನನ್ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿದ್ದಾರೆ.

ಇದೀಗ ಕೃತಿ ಮಿಲಿಯನೇರ್ ಉದ್ಯಮಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ.

ಕೃತಿ UK ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಹರಿದಾಡ್ತಿದೆ.

34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ನಟಿ ಕೃತಿಯ ಫೋಟೋಗಳು ವೈರಲ್ ಆಗಿದೆ.

ಫೋಟೋಗಳಲ್ಲಿ ನಟಿ ತನ್ನ ಗೆಳೆಯನೊಂದಿಗೆ ಕಾಣಿಸಿಕೊಂಡಿರುವ ಕಾರಣ ಈ ರೂಮರ್ಸ್ ಹರಿದಾಡ್ತಿದೆ.

ಕಬೀರ್ ಬಹಿಯಾ ಒಟ್ಟು ಸಂಪತ್ತು ಸುಮಾರು 3500 ಕೋಟಿ ಎಂದು ಹೇಳಲಾಗಿದೆ.

ಕೃತಿ 34 ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಕಬೀರ್ ವಯಸ್ಸು 24 ವರ್ಷ ಇದೆ.

ಕೃತಿಗಿಂದ ಕಬೀರ್ 10 ವರ್ಷ ಚಿಕ್ಕವನಿದ್ದಾನೆ ಎನ್ನಲಾಗ್ತಿದೆ.

ಕಬೀರ್ ಜೊತೆ ಕೃತಿ ಡೇಟಿಂಗ್ ಮಾಡೋದು ಪಕ್ಕಾ ಆದ್ರೆ ಶೀಘ್ರದಲ್ಲೇ ಬ್ಯೂಟಿ ಹಸೆಮಣೆ ಏರಲಿದ್ದಾರೆ.