ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಭಾರೀ ಆಘಾತ ಎದುರಾಗಿದೆ
ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿ ಪಟು ವಿನೇಶ್ ಫೋಗಟ್ ಅನರ್ಹರಾಗಿದ್ದಾರೆ
ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ವಿನೇಶ್ ಫೋಗಟ್ ಅನರ್ಹರಾಗಿದ್ದಾರೆ. ಒಲಿಂಪಿಕ್ಸ್ ತೀರ್ಪುಗಾರರ ವಿರುದ್ಧ ಭಾರತೀಯರು ಕಿಡಿಕಾರುತ್ತಿದ್ದಾರೆ
ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ. ಕುಸ್ತಿ ಸ್ಪರ್ಧೆಯಿಂದ ವಿನೇಶ್ ಫೋಗಟ್ ಔಟ್ ಆಗಿದ್ದಾರೆ. ಇದು ಭಾರತೀಯರಿಗೆ ದೊಡ್ಡ ಶಾಕ್ ನೀಡಿದೆ ಅಂದ್ರೆ ತಪ್ಪಾಗಲ್ಲ
50 ಕೆಜಿ ಕುಸ್ತಿಯಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಇಂದು ಮಧ್ಯ ರಾತ್ರಿ 12 ಗಂಟೆ ನಂತರ ಫೈನಲ್ ಪಂದ್ಯ ನಡೆಯಬೇಕಿತ್ತು. ಆದ್ರೀಗ ವಿನೇಶ್ ಫೋಗಟ್ ಅನರ್ಹರಾಗಿ ಒಲಿಂಪಿಕ್ಸ್‌ನಿಂದ ಹೊರ ಬಿದ್ದಿದ್ದಾರೆ
ಅಂತಿಮ ಪಂದ್ಯದ ಮುನ್ನಾದಿನದಂದು ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ 2 ಕಿಲೋಗಳಷ್ಟು ಅಧಿಕ ತೂಕ ಹೊಂದಿದ್ದರು. ವರದಿಗಳ ಪ್ರಕಾರ, ವಿನೇಶ್ ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡುತ್ತಲೇ ಇದ್ದರಂತೆ
ಇಂದು ಬೆಳಿಗ್ಗೆ ವಿನೇಶ್ ಫೋಗಟ್ 50 ಕೆಜಿಗಿಂತ ಕೆಲವು ಗ್ರಾಂ ತೂಕವನ್ನು ಹೊಂದಿದ್ದರು. ಹೆಚ್ಚಿನ ಕಾಮೆಂಟ್‌ಗಳಿಲ್ಲ ಈ ಸಮಯದಲ್ಲಿ ಅನಿಶ್ಚಿತ ತಂಡವು ವಿನೇಶ್ ಅವರ ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸುತ್ತದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ
ಇನ್ನೂ ವಿನೇಶ್ ಫೋಗಟ್ ಅನರ್ಹರಾಗಿರೋದ್ರಿಂದ ಅವರಿಗೆ ಯಾವುದೇ ಪದಕ ಸಿಗೋದಿಲ್ಲ. ಈ ವಿಚಾರ ನಿಜಕ್ಕೂ ಭಾರತೀಯರಿಗೆ ಬೇಸರ ಮೂಡಿಸಿದೆ. ಇನ್ನೂ ಇದರ ಬಗ್ಗೆ ವಿಚಾರಣೆ ನಡೆಸಬೇಕು ಅಂತ ಕೆಲವರು ಆಗ್ರಹಿಸುತ್ತಿದ್ದಾರೆ
ಇಡೀ ರಾತ್ರಿ ಸೈಕ್ಲಿಂಗ್, ಸ್ಕಿಪ್ಪಿಂಗ್, ಜಾಗಿಂಗ್ ಮಾಡಿದ್ರೂ ನೋ ಯೂಸ್! ವಿನೇಶ್ ಅನರ್ಹ ಹಿಂದೆ ಕಾಣದ ಕೈಗಳ ಕೈವಾಡ?