ನಟ ನಾಗ ಚೈತನ್ಯ ಅವರು ನಟಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಾಗಾರ್ಜುನ ಮಗ ಹಾಗೂ ಭಾವೀ ಸೊಸೆ ಜೊತೆ ಪೋಸ್ ಕೊಟ್ಟಿದ್ದಾರೆ.

ಟಾಲಿವುಡ್ ನಟ ಹಾಗೂ ನಟಿ ಆಗಸ್ಟ್ 8ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟ ನಾಗ ಚೈತನ್ಯ ಶೋಭಿತಾ ಜೊತೆ ಉಂಗುರ ಬದಲಾಯಿಸಿಕೊಂಡು ಮದುವೆ ಫಿಕ್ಸ್ ಮಾಡಿಕೊಂಡಿದ್ದಾರೆ.

ಖ್ಯಾತ ನಟಿ ಹಾಗೂ ಮಾಡೆಲ್ ಆಗಿರುವ ಶೋಭಿತಾ ಜೊತೆ ನಾಗ ಚೈತನ್ಯ ಪೋಸ್ ಕೊಟ್ಟರು.

ಶೋಭಿತಾ ಧೂಳಿಪಾಲ ಅವರು ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದರು.

ನಟಿ ತುಂಬಾ ಸುಂದರವಾದ ತಿಳಿ ಟೊಮ್ಯಾಟೋ ಬಣ್ಣದ ಸೀರೆ ಉಟ್ಟಿದ್ದರು.

ನಟಿ ಭಾವೀ ಮಾವ ನಾಗಾರ್ಜುನ ಅವರ ಜೊತೆ ಪೋಸ್ ಕೊಟ್ಟಾಗ ಫುಲ್ ಹ್ಯಾಪಿಯಾಗಿ ಕಂಡುಬಂದರು.

ಈ ಜೋಡಿ ಫೋಟೋದಲ್ಲಿ ಮುದ್ದಾಗಿ ಕಂಡರೂ ಕೂಡಾ ಸಮಂತಾ ಅಭಿಮಾನಿಗಳು ಇದನ್ನು ಇಷ್ಟಪಟ್ಟಿಲ್ಲ.

ಶೋಭಿತಾ ಧೂಳಿಪಾಲ ಅವರು ಮಾಡೆಲಿಂಗ್ ಹಾಗೂ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.