ನಾಗರ ಪಂಚಮಿಯ ದಿನದಂದು ನಾಗ ದೇವರಿಗೆ ಹಲವು ರೀತಿಯಲ್ಲಿ ಪೂಜೆಗಳು ಮಾಡುತ್ತೇವೆ. ನಾಗನಿಗೆ ಪೂಜೆ ಮಾಡುವುದರಿಂದ ನಮ್ಮ ಮನಸ್ಸಿನ ಸಂಕಲ್ಪ ಈಡೇರುತ್ತದೆ ಎನ್ನುವ ನಂಬಿಕೆ ಇದೆ

ಹಾಗೆ ನಾಗ ದೋಷ ಇದ್ದವರಿಗೆ ಈ ಪೂಜೆಯಿಂದ ದೋಷ ಮುಕ್ತಿಯಾಗುತ್ತೆ ಎಂದು ನಂಬುತ್ತಾರೆ

ಗರುಡ ಪುರಾಣದ ಪ್ರಕಾರ ಕೇವಲ ನಾಗನಿಗೆ ಪೂಜೆ ಮಾಡಿದ್ರೆ ಸಾಕಾಗುವುದಿಲ್ಲವಂತೆ, ಪೂಜೆಯ ದಿನದಂದು ವೃತ ಮಾಡಿ, ಬ್ರಹ್ಮಣರಿಗೆ ಅನ್ನಪ್ರಸಾದವನ್ನು ನೀಡಬೇಕು ಎಂದು ಗರುಡ ಪುರಾಣ ಹೇಳುತ್ತೆ

ನೀವು ಈ ನಂಬಿಕೆಗಳ ಪ್ರಕಾರ ಪೂಜೆಯನ್ನು ಮಾಡಿರುತ್ತೀರಿ. ಆದ್ರೆ ನಾಗರ ಪಂಚಮಿಯ ಮರುದಿನದಂದು ಈ ಕೆಲಸವನ್ನು ನೀವು ಮಾಡಲೇಬೇಕು

ಆ ಕೆಲಸ ಏನು ಅಂದ್ರೆ, ನೀವು ನಾಗನ ಕಟ್ಟೆಯ ಬಳಿ ಪೂಜೆಯನ್ನು ಮಾಡಿರುತ್ತೀರಾ ಹಾಗಾಗಿ ಮೊದಲು ಕಟ್ಟೆಯನ್ನು ಸ್ವಚ್ಚಮಾಡಿ, ನಾಗನ ಕಲ್ಲಿಗೆ ಹಾಲಿನ ಅಭಿಷೇಕವನ್ನು ಮಾಡಿರುವುದರಿಂದ ನಾಗನ ಕಲ್ಲನ್ನು ಸ್ವಚ್ಚ ಮಾಡಿಕೊಳ್ಳಿ.

ನಾಗನ ಪೂಜೆಗೆ ಅರಶಿನವನ್ನು ಬಳಸುತ್ತೇವೆ, ಅರಶಿನವನ್ನು ಮುಖ್ಯವಾಗಿ ಸ್ಚಚ್ಚ ಮಾಡಿಕೊಳ್ಳಿ ಅರಶಿನ ಬಿದ್ದ ಜಾಗದಲ್ಲಿ ಇರುವೆಯಂತಹ ಸಣ್ಣ ಕೀಟಗಳು ಬದುಕುವಿದಿಲ್ಲ

ಇನ್ನು ಪೂಜೆಗೆ ಬಳಸಿದ ಹೂವನ್ನು ಏನು ಮಾಡೋದು ಅಂತ ಯೋಚಿಸಬೇಡಿ. ಆ ಹೂವುಗಳನ್ನು ನೀವು ತೆಂಗಿನ ಮರದ ಬುಡಕ್ಕೆ ಹಾಕಿ. ಇದರಿಂದ ಯಾವ ಸಮಸ್ಯೆಯಾಗುವುದಿಲ್ಲ

ಇನ್ನು ಪೂಜೆಗೆ ಬಳಸಿದ ಹೂವನ್ನು ಏನು ಮಾಡೋದು ಅಂತ ಯೋಚಿಸಬೇಡಿ. ಆ ಹೂವುಗಳನ್ನು ನೀವು ತೆಂಗಿನ ಮರದ ಬುಡಕ್ಕೆ ಹಾಕಿ. ಇದರಿಂದ ಯಾವ ಸಮಸ್ಯೆಯಾಗುವುದಿಲ್ಲ

ಈ ರೀತಿ ಮಾಡಿದ್ರೆ ನಾಗ ದೇವರ ಕೃಪೆಯ ಜೊತೆಗೆ ವನದುರ್ಗೆಯ ಆರ್ಶೀವಾದ ನಿಮಗೆ ದೊರಕುತ್ತದೆ

ಮಲ್ಲಿಗೆಯಂತೆ ಮೃದು ಈ ದೋಸೆ; ಬಾಯಲ್ಲಿಟ್ಟರೆ ಕರಗುತ್ತೆ!