ದೇವರ ಬ್ಯಾನರ್‌ನಲ್ಲಿ ಮಿಯಾ ಖಲೀಫಾ ಫೋಟೋ!

ತಮಿಳುನಾಡಿನ ಕಾಂಚೀಪುರಂನ ಕುರುವಿಮಲದಲ್ಲಿ ದೇವಸ್ಥಾನದ ಉತ್ಸವದ ಕಾರ್ಯಕ್ರಮದಲ್ಲಿ ಒಂದು ಬ್ಯಾನರ್‌ ಹಾಕಲಾಗಿತ್ತು

ತಮಿಳುನಾಡಿನ ಫೇಮಸ್‌ ಹಬ್ಬವಾದ ಆದಿ ಪೆರುಕ್‌ ಜಾತ್ರೆಯಲ್ಲಿ ಈ ಘಟನೆ ನಡೆದಿದೆ

ಈ ಬ್ಯಾನರ್‌ನಲ್ಲಿ ದೇವರ ಪೋಟೋದ ಜೊತೆಗೆ ಮಾಜಿ ಪೋರ್ನ್‌ ತಾರೆ ಮಿಯಾ ಖಲೀಫಾ ಅವರ ಫೋಟೋವನ್ನು ಹಾಕಲಾಗಿದೆ

ದೇವಸ್ಥಾನದ ಸಮಿತಿಯವರು ಇದನ್ನು ಗಮನಿಸದೆ ದೇವಸ್ಥಾನದ ದಾರಿಯಲ್ಲಿ ಈ ಬ್ಯಾನರ್‌ ಹಾಕಲು ಅನುಮತಿ ನೀಡಿದ್ದಾರೆ

ದೇವಾಸ್ಥಾನದ ಉತ್ಸವದ ವಿವರಗಳನ್ನು ತಿಳಿಸುವ ಸಲುವಾಗಿ ಬ್ಯಾನರ್‌ ಮಾಡಲಾಗಿತ್ತು ಆ ಬ್ಯಾನರ್‌ನಲ್ಲಿ ಆದಿ ಪೆರುಕ್‌‌ ಹಬ್ಬದ ವಿಶೇಷತೆಯ ಬಗ್ಗೆ ತಿಳಿಸುವುದರ ಜೊತೆಗೆ ಮಿಯಾ ಪೋಟೋ ಸೇರಿಸಿದ್ದಾರೆ

ಈ ಬ್ಯಾನರ್‌ ಪೋಟೋಗಳು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದೆ

ಈ ವಿಷಯವು ಸ್ಥಳಿಯ ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು

ದೇವರ ಬ್ಯಾನರ್‌ನಲ್ಲಿ ಮಿಯಾ ಫೋಟೋ ಬರಲು ಕಾರಣವೇನು? ಮತ್ತು ಯಾರು ಈ ಕೆಲಸ ಮಾಡಿದ್ದಾರೆ ಎಂಬ ತನಿಖೆ ನಡೆಯುತ್ತಿದೆಯಂತೆ

ನಾಗ ಚೈತನ್ಯ ಸಮಂತಾ ಫಸ್ಟ್ ಲವ್ ಅಲ್ಲ! ಸ್ಯಾಮ್ ಮೊದಲು ಪ್ರೀತಿಸಿದ್ದ ಹೀರೋ ಇನ್ನೂ ಮದುವೆಯಾಗಿಲ್ಲ