ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಒಲಿದ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್

ಸ್ಯಾಂಡಲ್‌ವುಡ್‌ನ ನಟ- ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕೆ ಎರಡು ಪ್ರಶಸ್ತಿ ಬಂದಿದೆ.

70ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ನಲ್ಲಿ ಡಿವೈನ್ ಸ್ಟಾರ್ ಅತ್ಯುತ್ತಮ ನಟ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ.

2022 ರಲ್ಲಿ ರಿಲೀಸ್ ಆದ ಕಾಂತಾರ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ.

ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು.

ತುಳುನಾಡಿನ ಮಣ್ಣಿನ ಕಥೆ ಹೇಳಿದ್ದ ಶೆಟ್ರ ಈ ಚಿತ್ರ ಅತಿ ದೊಡ್ಡ ಹಿಟ್ ಕಂಡಿತ್ತು.

ಕಾಂತಾರ ಅಂತ ಅಂದ್ರೆ ಅದು ಕನ್ನಡ ಸಿನಿಮಾ ಅನ್ನೋ ಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಇಂದು ಆಗಸ್ಟ್ 16 ರಂದು ಘೋಷಿಸಲಾಗಿದೆ.

70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2022 ರ ಸಿನಿಮಾಗಳನ್ನು ಗುರುತಿಸುತ್ತದೆ.

ವಿಜೇತರನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಅಕ್ಟೋಬರ್ 2024 ರಲ್ಲಿ ಸಮಾರಂಭದಲ್ಲಿ ಗೌರವಿಸುತ್ತಾರೆ.