ನೀವು ತಿನ್ನುತ್ತಿರುವುದು ಮೀನಲ್ಲ ವಿಷ! ಸ್ವಲ್ಪ ಯಾಮಾರಿದ್ರೂ ಕಿಡ್ನಿ ಢಮಾರ್

ಮಾಂಸ ಪ್ರಿಯರಿಗೆ ಮೀನು ಅಂದ್ರೆ ಪಂಚ ಪ್ರಾಣ ಅಷ್ಟೇ ಅಲ್ಲಾ ಮೀನು ಆರೋಗ್ಯಕರ ಎಂದು ನಂಬುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಮೀನು ಪ್ರಿಯರಿಗೆ ಆತಂಕ ಉಂಟು ಮಾಡಿದೆ.

ನೀವು ಮೀನು ತಿನ್ನುವವರಾಗಿದ್ದರೆ, ಅಮೋನಿಯಾ ಫಾರ್ಮಾಲಿನ್ ಬಗ್ಗೆ ಎಚ್ಚರದಿಂದಿರುವುದು ಉತ್ತಮ.

ಮೀನುಗಳನ್ನು ಸಂಸ್ಕರಿಸಿಡಲು ಈ ಅಮೋನಿಯಾ ಫಾರ್ಮಲಿನ್ ಅನ್ನು ಬಳಸಲಾಗಿದೆ.

ಅಮೋನಿಯಾ ಫಾರ್ಮಾಲಿನೆ ಅರೋಗ್ಯಕ್ಕೆ ಹಾನಿಕಾರಕ ಅಂಶ ಕಿಡ್ನಿಗೆ ಹಾನಿಯುಂಟು ಮಾಡುತ್ತದೆ ಎಂದು ಹೇಳಲಾಗಿದೆ.

ಮೀನು ವ್ಯಾಪಾರಿಗಳ ಹಣದ ದುರಾಸೆಯಿಂದಾಗಿ ವಿಷಕಾರಿ ರಾಸಾಯನಿಕಗಳನ್ನು ಬಳಸಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ.

ನಿಮ್ಮ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಫಾರ್ಮಾಲಿನ್ ಎಂಬ ವಿಷಕಾರಿ ರಾಸಾಯನಿಕವು ಸಾಮಾನ್ಯವಾಗಿ ಮೀನನ್ನು ಸಂರಕ್ಷಿಸುವ ಹೆಸರಿನಲ್ಲಿ ದುರ್ಬಳಕೆಯಾಗುತ್ತಿದೆ.

ಕಡಿಮೆ ಮಟ್ಟದ ಫಾರ್ಮಾಲ್ಡಿಹೈಡ್‌ಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗಬಹುದು.