ಶುಕ್ರವಾರ ಸಂಜೆ ಈ ದೇವರಿಗೆ ಪೂಜೆ ಮಾಡಿ!

ಹಿಂದೂ ಧರ್ಮದ ಪ್ರಕಾರ ಶುಕ್ರವಾರ ಬಹಳ ಉತ್ತಮ ದಿನವಂತೆ

ಈ ದಿನದಂದು ಹಲವಾರು ದೇವಸ್ಥಾನಗಳಲ್ಲಿ ಮಹಾ ಪೂಜೆಗಳು ನಡೆಯುತ್ತದೆ

ಹೀಗಿರುವಾಗ ಶುಕ್ರವಾರದಂದು ಯಾವ ದೇವರನ್ನು ಪೂಜಿಸಿದ್ರೆ ಒಳ್ಳೆಯದಾಗುತ್ತೆ ಎಂದು ತಿಳಿಯೋಣ

ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನ ಎಂದು ನಂಬಲಾಗಿದೆ

ಈ ದಿನ ಲಕ್ಷ್ಮಿಯನ್ನು ಪೂಜಿಸಬೇಕು. ಶುಕ್ರ ಗ್ರಹಕ್ಕೆ ಅರ್ಪಿಸಲಾದ ಶುಕ್ರವಾರವು ಲಕ್ಷ್ಮಿ ದೇವಿಯನ್ನು, ದುರ್ಗಾ ದೇವಿಯನ್ನು ಮತ್ತು ಅನ್ನಪೂರ್ಣೇಶ್ವರಿ ದೇವಿಯನ್ನು ಪ್ರತಿನಿಧಿಸುತ್ತದೆ

ಈ ಮೂರು ದೇವತೆಗಳನ್ನು ಶುಕ್ರವಾರದಂದು ಪೂಜಿಸುವುದರಿಂದ ಸಂಪತ್ತು, ಸಮೃದ್ಧಿ, ಸಂತೃಪ್ತಿ, ಸಕಾರಾತ್ಮಕತೆ ಹೆಚ್ಚಾಗುತ್ತದೆಯಂತೆ

ಶುಕ್ರವಾರ ಸೂರ್ಯಾಸ್ತದ ನಂತರವೇ ಆಹಾರವನ್ನು ಸೇವಿಸಬೇಕು. ಈ ದಿನ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಉಪ್ಪನ್ನು ಹಾಕದ ಆಹಾರ ಪದಾರ್ಥವನ್ನು ಸೇವಿಸಬೇಕು

ಶುಕ್ರವಾರ ಮುಂಜಾನೆ ಅಥವಾ ಸಂಜೆ ಶುಚಿಯಾಗಿ ಬಿಳಿ, ಕೆಂಪು ಮತ್ತು ಹಸಿರು ಬಣ್ಣದ ಶುದ್ಧ ಬಟ್ಟೆಯನ್ನು ಧರಿಸಿ ಪೂಜಾ ಕೋಣೆಯನ್ನು ಶುದ್ಧಗೊಳಿಸಿ ನಂತರ ಈ ದೇವತೆಗಳಿಗೆ ಬೆಲ್ಲ, ಕಡಲೆ, ತುಪ್ಪ ಮತ್ತು ಹಾಲಿನಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಬೇಕು

ಈ ದಿನ ಮಹಾಲಕ್ಷ್ಮಿಗೆ ಮಹಾ ದೀಪಾರಾಧನೆ ಮಾಡಿದರೆ ನಿಮಗೆ ಶುಭವಾಗುವುದು ಖಚಿತ

ಹಣದ ಪರಿಸ್ಥಿತಿ ಮೊದಲಿಗಿಂತ ಬಲಶಾಲಿಯಾಗುತ್ತೆ, ದುಪ್ಪಟ್ಟು ಲಾಭವಾಗುತ್ತೆ