ನಾಳೆ ಕೃಷ್ಣನ ಈ ಹಬ್ಬವನ್ನು ಹೀಗೆ ಆಚರಿಸಿ!

ಇಂದು ಕರ್ನಾಟಕದಲ್ಲಿ ಕೃಷ್ಣಜನ್ಮಾಷ್ಟಮಿ ಭಾರೀ ಜೋರಾಗಿ ಆಚರಿಸಲಾಗಿದೆ

ಬಾಲಕೃಷ್ಣನ ವೇಷ ಹಾಕಿ ಮಕ್ಕಳು ಏಂಜಾಯ್‌ ಮಾಡಿದ್ದಾರೆ

ನಾಳೆ ಅಂದ್ರೆ 27ರಂದು ದೇಶದಾದ್ಯಂತ ಕೃಷ್ಣನ ಇನ್ನೊಂದು ಹಬ್ಬವನ್ನು ಆಚರಿಸಲಿದ್ದಾರೆ

ಅದು ಯಾವ ಹಬ್ಬ ಅಂದ್ರೆ ದಹಿ ಹಂಡಿ ಹಬ್ಬ, ಹೌದು ದಹಿ ಅಂದ್ರೆ ಮೊಸರು, ಹಂಡಿ ಅಂದ್ರೆ ಮಡಿಕೆ. ಕರ್ನಾಟಕ ಭಾಗದಲ್ಲಿ ಮೊಸರು ಕುಡಿಕೆ ಎನ್ನುತ್ತಾರೆ

ಈ ಹಬ್ಬವನ್ನು ವಿಶೇಷವಾಗಿ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ

ಇನ್ನು ಕರ್ನಾಟಕದ ಕರಾವಳಿ ಭಾಗಗಳಲ್ಲಿಯೂ ಅದ್ಧೂರಿಯಾಗಿ ನಡೆಯುತ್ತದೆ

ಈ ಹಬ್ಬದಂದು ಮಣ್ಣಿನ ಮಡಿಕೆಯಲ್ಲಿ ಬೆಣ್ಣೆ ಅಥವಾ ಮೊಸರನ್ನು ತುಂಬಿ ಉದ್ದದ ಕಂಬಗಳ ಸಹಾಯದಿಂದ 10 ರಿಂದ 12 ಅಡಿ ಉದ್ದದಲ್ಲಿ ನೇತು ಹಾಕಿರುತ್ತಾರೆ

ಆ ಮಡಿಕೆಯನ್ನು ಒಂದು ತಂಡ ಗೋಪುರ ಮಾದರಿ ನಿಲ್ಲುತ್ತಾ ಹೋಗಿ ಮಡಿಕೆಯನ್ನು ಹೊಡೆಯಬೇಕು. ಈ ಕೆಲಸ ಅಷ್ಟೊಂದು ಸುಲಭವಾಗಿರುವುದಿಲ್ಲ

ಯಾವ ತಂಡ ಹೊಡೆದು ಹಾಕುತ್ತದೆಯೋ ಆ ತಂಡ ವಿಜಯಶಾಲಿ ಎಂದು ಘೋಷಿಸಲಾಗುತ್ತದೆ

ಬಹುಮುಖ ದೃಷ್ಟಿಕೋನ ಜೀವನಕ್ಕೆ ಅಗತ್ಯ, ಕೃಷ್ಣ ಜನ್ಮಾಷ್ಠಮಿಗೆ ರವಿಶಂಕರ್ ಗುರೂಜಿ ಅವರ ವಿಶೇಷ ಸಂದೇಶ