ಡಿವೈನ್ ಸ್ಟಾರ್ ರಿಷಬ್ ಶೆಟ್ರ ಮನೆಯಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಆಚರಣೆ ಆಗಿದೆ.
ಮಕ್ಕಳಾದ ರಾಧ್ಯಾ, ಮಗ ರಣ್ವಿತ್ ಶೆಟ್ಟಿ ರಾಧ ಮತ್ತು ಕೃಷ್ಣರಾಗಿಯೇ ಕಂಗೊಳಿಸಿದ್ದಾರೆ.
ಅಮ್ಮ ಪ್ರಗತಿ ಶೆಟ್ಟಿ ಇಲ್ಲಿ ಯಶೋದೆಯಾಗಿಯೇ ಕಾಣಿಸಿಕೊಂಡಿದ್ದಾರೆ.
ಡಿವೈನ್ ಸ್ಟಾರ್ ಅವರ ಮನೆಯಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬ ಸೆಲೆಬ್ರೇಟ್ ಮಾಡಲಾಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬಕ್ಕಾಗಿಯೇ ಪ್ರಗತಿ ಶೆಟ್ಟಿ ಯಶೋದಾ ಮಾತೆಯಾಗಿಯೇ ರೆಡಿ ಆಗಿದ್ದಾರೆ.
ಮಗಳು ರಾಧ್ಯಾ ರಾಧೆಯ ರೀತಿ ರೆಡಿ ಆಗಿದ್ದಾಳೆ. ಪುತ್ರ ರಣ್ವಿತ್ ಶೆಟ್ಟಿ ಇಲ್ಲಿ ಕೃಷ್ಣನ ರೂಪದಲ್ಲಿಯೇ ಕಾಣಿಸುತ್ತಿದ್ದಾನೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಶುಭಾಶಯ ಕೂಡ ತಿಳಿಸಿದ್ದಾರೆ.
ಈ ಮೂಲಕ ನಮ್ಮ ಮನೆಯ ಮುದ್ದು ರಾಧಾ ಕೃಷ್ಣರಿಂದ ಎಲ್ಲರಿಗೂ ಶ್ರೀಕೃಷ್ಣಜನ್ಮಾಷ್ಟಮಿಯ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ರ ಮನೆಯಲ್ಲಿ ಎಲ್ಲ ಹಬ್ಬಗಳನ್ನ ಕೂಡ ಸೆಲೆಬ್ರೇಟ್ ಮಾಡುತ್ತಾರೆ.
ಯಾವುದೇ ಹಬ್ಬ ಇದ್ದರೂ ಅದನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡ್ತಾನೇ ಬಂದಿದ್ದಾರೆ.