ವಾಸ್ತು ಪ್ರಕಾರ ಈ ಬಣ್ಣದ ಗಣಪನನ್ನು ಮನೆಯಲ್ಲಿಡಬೇಕಂತೆ!

ಗಣೇಶ ಹಬ್ಬ ಹತ್ತಿರ ಬಂತು. ಚೌತಿ ಹಬ್ಬದ ತಯಾರಿ ಮಾಡೋದ್ರಲ್ಲಿ ಭಕ್ತರು ಬ್ಯುಸಿಯಾಗಿದ್ದಾರೆ

ಹೀಗಿರುವಾಗ ಯಾವ ಬಣ್ಣದ ಗಣಪತಿ ಮೂರ್ತಿಯನ್ನು ಮನೆಗೆ ತರಬಹುದು ಮತ್ತು ವಾಸ್ತು ಪ್ರಕಾರ ಏನು ಲಾಭವಿದೆ ಎಂದು ತಿಳಿಯೋಣ

ವಾಸ್ತು ಪ್ರಕಾರ, ಹಸಿರು ಬಣ್ಣದ ಗಣಪ ಮೂರ್ತಿಯನ್ನು ಮನೆಗೆ ತಂದು ಉತ್ತರ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡಿ, ಹೀಗೆ ಮಾಡಿದ್ರೆ ಹಣಕ್ಕೆ ಸಂಬಂಧಿಸಿದ ತೊಂದರೆಗಳು ಕಡಿಮೆಯಾಗುತ್ತದೆ

ಕಪ್ಪು ಬಣ್ಣದ ಗಣಪತಿಯ ಮೂರ್ತಿಯನ್ನು ಮನೆಗೆ ತಂದು ಈಶಾನ್ಯ ದಿಕ್ಕಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಮಾನಸಿಕ ಒತ್ತಡ ಮತ್ತು ರೋಗದ ದೋಷಗಳನ್ನು ಕಡಿಮೆಯಾಗುತ್ತದೆ

ಕಿತ್ತಳೆ ಬಣ್ಣದ ಮೂರ್ತಿಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡಿ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತಂತೆ

ಬದುಕಿನಲ್ಲಿ ಸಂತೋಷ ಮತ್ತು ಶಾಂತಿಯಿಂದ ಇರಲು ಹಾಗೂ ಸಂಕಷ್ಟಹರ ಗಣಪತಿಯ ಆಶೀರ್ವಾದವನ್ನು ಪಡೆಯಲು, ಬಿಳಿ ಬಣ್ಣದ ಮೂರ್ತಿಯನ್ನು ಮನೆಗೆ ತನ್ನಿ. ಈ ಬಣ್ಣದ ಗಣಪತಿಯನ್ನು ವಾಯುವ್ಯ ದಿಕ್ಕಿನಲ್ಲಿ ಇಡಬೇಕು

ವಾಸ್ತು ಪ್ರಕಾರ, ಗಣೇಶನ ಹಲವಾರು ಮೂರ್ತಿಗಳನ್ನು ಮನೆಯಲ್ಲಿ ಒಟ್ಟಿಗೆ ಇಡಬೇಡಿ, ನೀವು ಮನೆಯಲ್ಲಿ ಇಟ್ಟಿರುವ ಗಣಪನ ಮೂರ್ತಿಯ ಎತ್ತರವು 6 ಇಂಚುಗಳಿಗಿಂತ ಹೆಚ್ಚಿರಬಾರದು

ಸಣ್ಣ ಆಸೆಗಳು ಈಗ ಈಡೇರುತ್ತೆ, ಖುಷಿಗೆ ಮಿತಿಯೇ ಇರಲ್ಲ