ಭಗವದ್ಗೀತೆಯನ್ನು ಕಣ್ಣಿಗೊತ್ತಿ ನಮಸ್ಕರಿಸಿದ ಕಿಚ್ಚ!

ಇಂದು ಕಿಚ್ಚ ಸುದೀಪ ಅವರ ಹುಟ್ಟುಹಬ್ಬ. ಹೀಗಿರುವಾಗ ಅಭಿಮಾನಿಗಳ ಸಮ್ಮುಖದಲ್ಲಿ ಭಾರೀ ಆಚರಣೆ ನಡೆಯುತ್ತಿದೆ

ಸಧ್ಯ ಬೆಂಗಳೂರಿನಲ್ಲಿ ಸುದೀಪ ಅವರು ತಮ್ಮ ಫ್ಯಾನ್ಸ್‌ಗಳ ಜೊತೆ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡುತ್ತಿದ್ದಾರೆ

ಈ ಸಂದರ್ಭದಲ್ಲಿ ಪುರೋಹಿತರ ಗುಂಪೊಂದು ಸುದೀಪ ಅವರಿಗೆ ವಿಶೇಷ ಪೂಜೆ ಮಾಡುವ ಮೂಲಕ ವಿಶ್‌ ಮಾಡಿದ್ರು

ಬಳಿಕ ಅಭಿಮಾನಿ ಒಬ್ರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ರು

ಇದನ್ನು ಸ್ವಿಕರಿಸಿದ ಕಿಚ್ಚ, ಭಗವದ್ಗೀತೆಯನ್ನು ತನ್ನ ಎರಡು ಕಣ್ಣುಗಳಿಗೆ ಒತ್ತಿಕೊಂಡು ನಮಸ್ಕರಿಸಿದ್ದಾರೆ

ಈ ಸಂದರ್ಭದ ಫೋಟೋ, ವಿಡಿಯೋಗಳಂತೂ ಸಖತ್‌ ವೈರಲ್‌ ಆಗಿದೆ

ಅಭಿಮಾನಿಗಳು ಈ ದೃಷ್ಯವನ್ನು ಕಣ್ತುಂಬಿಕೊಳ್ಳುತ್ತಾ, ಜೋರಾಗಿ ಕಿಚ್ಚನಿಗೆ ಜೈಕಾರ ಹಾಕಿದ್ದಾರೆ

ಹೋದಲ್ಲೆಲ್ಲ ತಲೆ ಎತ್ತಿ ಓಡಾಡೋಕಾಗುತ್ತೆ ಅಂದ್ರೆ ಅದಕ್ಕೆ ನೀವೇ ಕಾರಣ! ಫ್ಯಾನ್ಸ್ ಬಗ್ಗೆ ಕಿಚ್ಚನ ಸ್ಪೆಷಲ್ ಟಾಕ್