ನಾನೂ ಶೆಟ್ರ ಹುಡುಗಿ; ಬೇಗ ಕರೆಸಿಕೊಳ್ಳಿ ಶೆಟ್ರೆ ಎಂದ ನೇಹಾ ಶೆಟ್ಟಿ!

ಸ್ಯಾಂಡಲ್‌ವುಡ್‌ನ ಸುಂದರಿ ನೇಹಾ ಶೆಟ್ಟಿ ಕನ್ನಡದಲ್ಲಿ ಮಾಡಿರೋದು ಒಂದೇ ಸಿನಿಮಾ

ಮುಂಗಾರು ಮಳೆ-2 ಚಿತ್ರ ಆದ್ಮೇಲೆ ನೇಹಾ ಶೆಟ್ಟಿ ಕಳೆದೆ ಹೋದ್ರು.

ಆದರೆ, ನೇಹಾ ಶೆಟ್ಟಿ ಪಕ್ಕದ ಟಾಲಿವುಡ್‌ನಲ್ಲಿಯೇ ಮಿಂಚುತ್ತಿದ್ದಾರೆ.

ಮುಂಗಾರು ಮಳೆ -೨ ಆದ್ಮೇಲೆ ನೇರವಾಗಿಯೇ ಟಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದ ಸ್ಕ್ರಿಪ್ಟ್‌ಗಳನ್ನ ಕೇಳ್ತಿರೋ ನೇಹಾ ಶೆಟ್ಟಿ, ಒಂದು ಒಳ್ಳೆ ಸ್ಕ್ರಿಪ್ಟ್‌ಗಾಗಿಯೇ ಕಾಯುತ್ತಿದ್ದಾರೆ.

ಒಳ್ಳೆ ಸ್ಕ್ರಿಪ್ಟ್ ಅಂದ್ರೆ, ಅದು ಕಂಪ್ಲೀಟ್ ಹೊಸ ರೀತಿಯ ಪಾತ್ರವೇ ಆಗಿರಬೇಕು ಅನ್ನೋದೇ ಆಗಿದೆ.

ತಮಿಳು, ಮಲೆಯಾಳಂ, ತೆಲುಗು ಭಾಷೆಯಿಂದಲೂ ಆಫರ್ಸ್ ಬಂದಿವೆ.

ನಾನು ಟಾಲಿವುಡ್ ಆಯ್ಕೆ ಮಾಡಿಕೊಂಡೆ ಅಂತ ನೇಹಾ ಶೆಟ್ಟಿ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.

ನೇಹಾ ಶೆಟ್ಟಿ ಬಹುಶಃ ಶೆಟ್ರ ಸಿನಿಮಾದಲ್ಲಿಯೇ ನಟಿಸ್ತಾರೆ ಅನಿಸುತ್ತದೆ.

ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಜೊತೆಗೇನೆ ಕೆಲಸ ಮಾಡ್ಬೇಕು ಅನ್ನೋದನ್ನ ಈಗಾಗಲೇ ಹೇಳಿಕೊಂಡಿದ್ದಾರೆ.