ಕೇಸರಿ ಬಣ್ಣದ ಈ ಸಿಹಿ ನಿಮ್ಮ ಫೇವರೆಟ್ ಕೂಡ ಆಗಿರಬಹುದು

ಭಾರತದಲ್ಲಿ ಅನೇಕ ಹಬ್ಬಗಳು, ಆಚರಣೆಗಳು ಒಂದೊಂದು ಸಿಹಿಯೊಂದಿಗೆ ಬೆರೆತಿರುತ್ತದೆ.

ಯುಗಾದಿ ಅಂದ್ರೆ ಹೋಳಿಗೆ, ದೀಪಾವಳಿ ಅಂದರೆ ಕಜ್ಜಾಯ ಎಂಬಂತೆ ಸಿಹಿ ತಿಂಡಿಗಳು ನಮ್ಮ ಸಂಸ್ಕೃತಿಯ ಭಾಗವಾಗಿವೆ.

ರಸಗುಲ್ಲಾ ನಮ್ಮ ದೇಶದ ರಾಷ್ಟ್ರೀಯ ಸಿಹಿತಿಂಡಿ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ ಇದು ತಪ್ಪು.

ಕುತೂಹಲಕಾರಿ ಸಂಗತಿಯೆಂದರೆ ನೀವು ಈ ಸಿಹಿತಿಂಡಿಯನ್ನು ಅತಿಯಾಗಿ ತಿಂದಿರಬಹುದು.

ನಮ್ಮ ದೇಶದ ರಾಷ್ಟ್ರೀಯ ಸಿಹಿತಿಂಡಿ ಎಂದರೆ ಜಲೇಬಿ ಅಥವಾ ಜಿಲೇಬಿ.

ಇದನ್ನು ಇರಾನಿನ ಸಿಹಿತಿಂಡಿ ಎಂದು ಪರಿಗಣಿಸಲಾಗಿದೆ. ಸಕ್ಕರೆ ಪಾಕದಲ್ಲಿ ಅದ್ದಿದ ಕೇಸರಿ ಬಣ್ಣದ ಸಿಹಿ ತಿಂಡಿ ಇದು.

ಜಿಲೇಬಿ ಬಗ್ಗೆ ಅನೇಕ ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ

ಜಿಲೇಬಿ ಸಿಹಿತಿಂಡಿಯನ್ನು ‘ಕುಂಡಲಿಕಾ’ ಅಥವಾ ‘ಜಲವಲ್ಲಿಕಾ’ ಎಂದು ಸಹ ಕರೆಯಲಾಗುತ್ತದೆ.

ಜಲೇಬಿ ಮೇಲಿನ ಭಾರತೀಯರ ಪ್ರೀತಿ ಶತಮಾನಗಳಷ್ಟು ಹಳೆಯದು ಎಂದು ತಿಳಿದಿದೆ.