ಎರಡನೇ ಬಾರಿಗೆ ತಾಯಿಯಾದ ಖುಷಿಯಲ್ಲಿ ಪ್ರಣೀತಾ!

ಕನ್ನಡದ ನಾಯಕಿ ನಟಿ ಪ್ರಣಿತಾ ಸುಭಾಷ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮೊದಲ ಮಗು ಹೆಣ್ಣಾಗಿತ್ತು. ಇದೀಗ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಮಗಳಿಗೆ ತಮ್ಮ ಬಂದ ಅನ್ನೋ ಖುಷಿಯನ್ನು ಕೂಡ ಹಂಚಿಕೊಂಡಿದ್ದಾರೆ.

ಆ ಮಗುವಿಗೆ ಆರ್ನಾ ಅನ್ನೋ ಹೆಸರು ಇಟ್ಟಿದ್ದರು. ಈಗ ಎರಡನೇ ಸಲ ಅಮ್ಮ ಆಗಿದ್ದಾರೆ.

ಗಂಡು ಮಗು ಹುಟ್ಟಿದ್ಮೇಲೆ ಮಗುವಿನೊಂದಿಗೆ ಒಂದು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

ಆ ಫೋಟೋದಲ್ಲಿ ಅಮ್ಮ ಮತ್ತು ಮಗ ಇಬ್ಬರು ಮುದ್ದಾಗಿಯೇ ಕಾಣಿಸಿಕೊಂಡಿದ್ದಾರೆ.

ಪ್ರಣಿತಾ ಸುಭಾಷ್ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದರು.

ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಜೊತೆಗೆ 2021 ರಲ್ಲಿ ಮದುವೆ ಆಗಿದ್ದರು.

2022 ರಲ್ಲಿ ಮಗಳು ಆರ್ನಾ ಹುಟ್ಟಿದ್ದಳು. ಈಗ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.