ಗಣಪತಿಗ್ಯಾಕೆ ಮೊದಲ ಪೂಜೆ?!

ಗಣೇಶ ಚತುರ್ಥಿ ಹತ್ತಿರ ಬಂತು, ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ

ಈ ಸಂದರ್ಭದಲ್ಲಿ ಗಣಪನ ಹಲವು ವಿಚಾರಗಳನ್ನ ನೀವು ತಿಳಿದುಕೊಳ್ಳಬೇಕು

ಹಾಗಾದ್ರೆ ಬನ್ನಿ, ಗಣಪನನ್ನು ಪ್ರಥಮ ಪೂಜಿತ ಅನ್ನೋದ್ಯಾಕೆ, ಗಣಪತಿಗ್ಯಾಕೆ ಮೊದಲ ಪೂಜೆ ಮಾಡಬೇಕು ಅನ್ನುವ ಕಥೆಯನ್ನು ತಿಳಿಯೋಣ

ಒಂದು ದಿನ ಪಾರ್ವತಿಯು ಅರಶಿಣದಿಂದ ಮಾಡಿದ ಮಗುವಿನ ಕೈಗೆ ದಂಡವನ್ನು ನೀಡಿ ನಾನೀಗ ಸ್ನಾನವನ್ನು ಮಾಡಬೇಕು. ನೀನು ಈ ದ್ವಾರದ ಮುಂದೆ ನಿಂತಿರು ಎಂದು ಹೇಳಿ ಹೋಗಿರುತ್ತಾರೆ

ನನ್ನ ಸ್ನಾನವಾಗುವವರೆಗೂ ಯಾರನ್ನು ಬಿಡಬೇಡ ಎಂದು ತಿಳಿಸುತ್ತಾರೆ, ಸಂತಸಗೊಂಡ ಬಾಲಕನು ತಾಯಿಯ ಮಾತಿನಂತೆ ಕೈಲಾಸದ ಬಾಗಿಲನ್ನು ಕಾಯುತ್ತಿರುತ್ತಾನೆ

ಕೆಲವೇ ಕ್ಷಣಗಳಲ್ಲಿ ತನ್ನ ಪತ್ನಿಯನ್ನು ಕಾಣಲು ಸಾಕ್ಷಾತ್ ಪರಶಿವನು ಅಲ್ಲಿಗೆ ಆಗಮಿಸುತ್ತಾನೆ. ಅಲ್ಲಿರುವ ಈ ಬಾಲಕನನ್ನು ಕಂಡು ಶಿವನಿಗೆ ಅಚ್ಚರಿಯಾಗುತ್ತದೆ

 ಮನೆಯ ಒಳಗೆ ಶಿವನು ಪ್ರವೇಶಿಸಲು ಯತ್ನಿಸಿದಾಗ, ನಾನು ನನ್ನ ಅಮ್ಮನ ಮಗ. ನನ್ನ ಅಮ್ಮನು ಸ್ನಾನ ಮಾಡಲು ಹೋಗಿದ್ದಾಳೆ. ಅವಳ ಸ್ನಾನ ಮುಗಿಯುವವರೆಗೂ ಒಳಗಡೆ ಯಾರನ್ನು ಬಿಡದಂತೆ ಕಾವುಲು ಕಾಯುವುದೇ ನನ್ನ ಕರ್ತವ್ಯ ಎನ್ನುತ್ತಾನೆ

ನಿನ್ನ ತಾಯಿ ಮಾಡಿರುವ ಕಟ್ಟಪ್ಪಣೆ ಬೇರೆಯವರಿಗೆ. ನಿನಗೆ ನಾನಾರೆಂದು ತಿಳಿಯದು. ಕೈಲಾಸವೇ ನನ್ನದು. ಮೊದಲು ನನ್ನನ್ನು ಒಳಗೆ ಬಿಡು ಎಂದು ಪ್ರೀತಿಯಿಂದ ಕೇಳುತ್ತಾನೆ

ಆಗ ಆ ಬಾಲಕ ಈ ವಿನಂತಿಯನ್ನು ತಿರಸ್ಕರಿಸುತ್ತಾನೆ. ಇದರಿಂದ ಕ್ರೋಧಗೊಂಡ ಶಿವನು ತನ್ನ ತ್ರಿಶೂಲದಿಂದ ಆ ಮಗುವಿನ ರುಂಡವನ್ನು ಕತ್ತರಿಸುತ್ತಾನೆ

ಆ ವೇಳೆಗೆ ಸ್ನಾನ ಮುಗಿಸಿದ ಪಾರ್ವತಿಯು ಬಂದು ತನ್ನ ಮಗನಿಗೆ ಆದ ಅವಸ್ಥೆಯನ್ನು ಕಂಡು , ಶಿವನ ಮೇಲೆ ಕೋಪಗೊಂಡು ಇವನು ನನ್ನ ಮಗ ಇವನನ್ನು ಬದುಕಿಸು ಎಂದು ಹಠ ಹಿಡಿಯುತ್ತಾಳೆ

ಆಗ ಶಿವನು ಉತ್ತರ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗಿರುವ ಪ್ರಾಣಿಯ ತಲೆಯನ್ನು ತರಲು ತನ್ನ ಭಟರಿಗೆ ತಿಳಿಸುತ್ತಾನೆ. ಆಗ ಭಟರು ಆನೆಯ ತಲೆಯೊಂದನ್ನುತರುತ್ತಾರೆ

ಆ ತಲೆಯನ್ನೇ ಶಿಶುವಿಗೆ ಇಟ್ಟು ಹೋದ ಪ್ರಾಣವನ್ನು ಮರಳಿ ನೀಡುತ್ತಾರೆ. ಆಗ ಸುಮುಖನನ್ನು ಬಿಗಿದಪ್ಪಿ ಮುದ್ದಿಸಿದ ಶಿವ ಪಾರ್ವತಿಯರು ಅವನಿಗೆ ಭೂಲೋಕದಲ್ಲಿ ಮೊದಲ ಪೂಜೆಯು ಸಲ್ಲಲಿ ಎಂದು ವರ ನೀಡುತ್ತಾರೆ

ಹೀಗಾಗಿ ಗಣಪತಿಗೆ ಮೊದಲ ಪೂಜೆಯ ಅವಕಾಶ ದೊರೆಯುತ್ತದೆ

ಗಣೇಶನಿಗೂ ಮುನ್ನ ಸ್ವರ್ಣಗೌರಿ ಸ್ವಾಗತಿಸಿದ ಬೆಂಗಳೂರು ಜನತೆ