ದೇವಸ್ಥಾನದಲ್ಲಿ ನೀಡೋ ತೀರ್ಥದ ಮಹತ್ವವಿದು!

ನಾವು ದೇವಸ್ಥಾನಕ್ಕೆ ಹೋಗಿರುತ್ತೇವೆ ಹಾಗೆ ಅಲ್ಲಿ ನೀಡೋ ತೀರ್ಥ ಪ್ರಸಾದವನ್ನು ಸ್ವಿಕರಿಸಿರುತ್ತೇವೆ

ಆದ್ರೆ ಆ ತೀರ್ಥದ ಮಹತ್ವವನ್ನು ಹಲವರು ತಿಳಿದಿರುವುದಿಲ್ಲ

ಬನ್ನಿ, ಇಂದು ನಾವು ತೀರ್ಥದ ಮಹತ್ವವನ್ನು ತಿಳಿಯೋಣ

ತೀರ್ಥದ ನೀರು ಕೇವಲ ನೀರಲ್ಲ. ಅದು ದೇಹವನ್ನು ಶುದ್ದಿ ಮಾಡೋ ಶಕ್ತಿಯುಳ್ಳ ದೇವರ ಪ್ರಸಾದ

ಈ ತೀರ್ಥವನ್ನು ಕರ್ಪೂರ, ಲವಂಗ, ಕೇಸರಿ, ಏಲಕ್ಕಿ, ತುಳಸಿಯಿಂದ ಮಾಡಲಾಗುತ್ತದೆ

ಈ ತೀರ್ಥವನ್ನು ಮೂರು ಚಮಚದಷ್ಟು ಭಕ್ತರಿಗೆ ನೀಡಲಾಗುತ್ತದೆ. ಈ ನೀರು ದೈಹಿಕ-ಮಾನಸಿಕ ಚಿಕಿತ್ಸೆಗೆ ನಂಬರ್‌ 1 ಮದ್ದಿನಂತೆ ಕೆಲಸ ಮಾಡುತ್ತೆ

ನೈಸರ್ಗಿಕವಾಗಿ ರಕ್ತ ಶುದ್ಧೀಕರಣ ಮತ್ತು ಉತ್ತಮ ಔಷಧೀಯ ಮೌಲ್ಯವನ್ನು ಈ ತೀರ್ಥ ಹೊಂದಿರುತ್ತದೆ

ಅದೇ ನೀರಿನಿಂದ ವಿಗ್ರಹವನ್ನು ಸ್ನಾನ ಮಾಡಿರುವುದರಿಂದ ನೀರಿನಲ್ಲಿ ಕಾಂತೀಯ ವಿಕಿರಣವೂ ಇರುತ್ತದೆ

ಅಷ್ಟು ಮಾತ್ರವಲ್ಲ ಈ ತೀರ್ಥವನ್ನು ಕುಡಿದರೆ ಭಕ್ತರ ಎಲ್ಲಾ ಪಾಪಗಳನ್ನು ಕಳೆಯುತ್ತದೆಯಂತೆ

ಇನ್ನೊಂದು ವಿಚಾರ ಏನಂದ್ರೆ ತೀರ್ಥದಲ್ಲಿ ಬಳಸಿದ ಲವಂಗದಿಂದ ದಂತಕ್ಷಯ ಕಡಿಮೆಯಾಗುತ್ತದೆ

ಕರ್ಪೂರ ಮತ್ತು ಏಲಕ್ಕಿಯಿಂದ ಕೆಮ್ಮು ಮತ್ತು ನೆಗಡಿ ಕಡಿಮೆಯಾಗುತ್ತದೆ

ಇನ್ನು ಕೇಸರಿ ಮತ್ತು ತುಳಸಿ ನೈಸರ್ಗಿಕವಾಗಿ ಬಾಯಿಯನ್ನು ತಾಜಾಗೊಳಿಸುತ್ತದೆ

ಆಗಾಗ ಅಳುವ ಮಗುವನ್ನು ಸಂಭಾಳಿಸೋದು ಹೇಗೆ? ಅಂಥ ಸಂದರ್ಭಗಳಲ್ಲಿ ಪೋಷಕರ ಪ್ರತಿಕ್ರಿಯೆ ಹೇಗಿರಬೇಕು?