ಅಂಬಿ ಮನೆಯ ಸೊಸೆ ಅವಿವಾ ಅದ್ಧೂರಿ ಸೀಮಂತ!

ಹಿರಿಯ ನಟ ಅಂಬರೀಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಅಭಿಷೇಕ್ ಪತ್ನಿ ಅವಿವಾ ಸೀಮಂತದ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಅಂಬರೀಷ್ ಹಾಗೂ ಸುಮಲತಾ ಮಗ ಅಭಿಷೇಕ್ ತಂದೆಯಾಗ್ತಿರುವ ಖುಷಿಯಲ್ಲಿದ್ದಾರೆ.

ಅಭಿಷೇಕ್ ಅಂಬರೀಶ್ ಹಾಗೂ ಪತ್ನಿ ಅವಿವಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸೀಮಂತ ಶಾಸ್ತ್ರದ ಫೋಟೋಗಳನ್ನು ಅವಿವಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭಿಷೇಕ್ ಅವಿವಾ ಜೊತೆ ನಿಂತು ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

ತುಂಬು ಗರ್ಭಿಣಿ ಅವಿವಾ ಬಿದ್ದಪ್ಪ ಹಸಿರು ಸೀರೆಯುಟ್ಟು ಮಿಂಚುತ್ತಿದ್ದಾರೆ.

ಅವಿವಾ ಸೀಮಂತದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೆಲೆಬ್ರಿಟಿಗಳು ಹಾಗೂ ಸ್ನೇಹಿತರು ಅಭಿಷೇಕ್ ಹಾಗೂ ಅವಿವಾ ಜೋಡಿಗೆ ಶುಭಕೋರಿದ್ರು.

ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಜೂನ್‌ 5, 2023ರಂದು ಮದುವೆ ಆಗಿದ್ದರು.