ಭಾರತದಲ್ಲಿ ಪ್ರತಿ ಗಂಟೆಗೆ ಎಷ್ಟು ಜನ ಸಾಯುತ್ತಿದ್ದಾರೆ?
ಪ್ರತಿ ನಿಮಿಷಕ್ಕೆ ಜಗತ್ತಿನಲ್ಲಿ ಎಲ್ಲೋ ಒಬ್ಬರು ಸಾಯುತ್ತಿರುತ್ತಾರೆ.
ಅನಾರೋಗ್ಯ, ಅಪಘಾತದಿಂದಾಗಿ ಅಥವಾ ಮತ್ಯಾವುದೋ ಕಾರಣಗಳಿಗೆ ಸಾಯುವವರ ಸಂಖ್ಯೆಗೇನು ಕಡಿಮೆ ಇಲ್ಲ.
ಪ್ರತಿ ದಿನಕ್ಕೆ, ತಿಂಗಳಿಗೆ ಮತ್ತು ವರ್ಷಕ್ಕೆ ಎಷ್ಟು ಜನರು ಸಾಯುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಸಾವು ತಪ್ಪಿದ್ದಲ್ಲ.
ಜಗತ್ತಿನಲ್ಲಿ ಪ್ರತಿ ಗಂಟೆಗೆ ಎಷ್ಟು ಜನರು ಸಾಯುತ್ತಾರೆ ಎಂದು ನಿಮಗೆ ಗೊತ್ತಾ?
ವಿಶ್ವಾದ್ಯಂತ ಪ್ರತಿ ವರ್ಷ 5.6 ಕೋಟಿಗೂ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಅಂದಾಜಿಸಲಾಗಿದೆ.
2023ರಲ್ಲೇ 6.1 ಕೋಟಿ ಜನರು ಸಾವನ್ನಪ್ಪಿದ್ದಾರೆ ಅಂತ ವರದಿಯೊಂದು ತಿಳಿಸಿದೆ.
ವರದಿಗಳ ಪ್ರಕಾರ ಪ್ರಪಂಚದಲ್ಲಿ ಪ್ರತಿ ತಿಂಗಳಿಗೆ 4.6 ಮಿಲಿಯನ್, ದಿನಕ್ಕೆ 1.50 ಲಕ್ಷ ಜನ ಸಾಯುತ್ತಿದ್ದಾರಂತೆ.
ಇನ್ನು ಪ್ರತಿ ಗಂಟೆ 6 ಸಾವಿರ, ನಿಮಿಷಕ್ಕೆ 106 ಮತ್ತು ಸೆಕೆಂಡಿಗೆ ಇಬ್ಬರು ಮೃತಪಡುತ್ತಿದ್ದಾರೆ ಎಂದು ವರದಿ ಹೇಳಿದೆ.