ಬಿಗ್ ಬಾಸ್ ಸೀಸನ್ 11ರಲ್ಲಿ ಮೈತುಂಬಾ ಚಿನ್ನ ಹಾಕಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಗೋಲ್ಡ್ ಸುರೇಶ್ ಬಗ್ಗೆ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಇನ್ಸ್ಟಾಗ್ರಾಮ್, ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿಅವರ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗ್ತಿದೆ.
ಗೋಲ್ಡ್ ಸುರೇಶ್ ಹೇಳುವ ಹಾಗೆ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಅನ್ನೋ ಪುಟ್ಟ ಗ್ರಾಮ.
ಸಿದ್ದೇಗೌಡ, ಅಕ್ಕವ್ವ ದಂಪತಿಯ ಎಂಟನೆಯ ಮಗನಾಗಿ ಹುಟ್ಟಿದ ಸುರೇಶ್ ಪ್ರಾಥಮಿಕ ಶಿಕ್ಷಣವನ್ನ ಅಥಣಿಯಲ್ಲಿ ಮುಗಿಸಿದ್ದಾರೆ.
ನಂತರ ಮೈಸೂರಿನ ಸುತ್ತೂರು ಮಠದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು.
ಸುರೇಶ್ ಗೋಲ್ಡ್ ಸುರೇಶ್ ಆಗುವುದಕ್ಕೂ ಮೊದಲು ಪಾರ್ಥನಹಳ್ಳಿ ಗ್ರಾಮದ ತಮ್ಮ ತೋಟದಲ್ಲಿ ಅಣ್ಣಂದಿರೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿದ್ರು.
ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಒಂದುದಿನ ನಸುಕಿನ ಜಾವ ಎದ್ದು ಬೆಂಗಳೂರಿನತ್ತ ಮುಖ ಮಾಡಿದ್ರು. ಬಳಿಕ ಸುರೇಶ ಅವರು ತಿರುಗಿ ಬಂದಿದ್ದು ಗೋಲ್ಡ್ ಸುರೇಶನಾಗಿ. ಸುರೇಶ್ ಅವರ ಕುಟುಂಬ ಈಗಲೂ ಕೃಷಿಯನ್ನೇ ಅವಲಂಬಿಸಿದೆ.
ಗೋಲ್ಡ್ ಸುರೇಶ್ ಅವರ ಅಣ್ಣಂದಿರು ಹಾಗೂ ಕುಟುಂಬ ಸದಸ್ಯರು ತುಂಬಾ ಸಿಂಪಲ್ ಆಗಿದ್ದಾರೆ.
ಯಾವುದೇ ಆಡಂಬರದ ಜೀವನ ಸಾಗಿಸದೆ ಸಾಮಾನ್ಯ ಜೀವನ ಸಾಗಿಸುತ್ತಿದ್ದಾರೆ. ಸುರೇಶ ಹುಟ್ಟಿದ ಮನೆಯ ಸುತ್ತಲೂ ತೆಂಗು, ಅಡಿಕೆ, ಮಾವು, ನಿಂಬೆ ಹೀಗೆ ಬಗೆಬಗೆಯ ಗಿಡ ಮರಗಳಿದ್ದು ಹಸಿರಿನಿಂದ ಕಂಗೊಳಿಸುತ್ತಿದೆ.
Jayam Ravi: ಮತ್ತೆ ಒಂದಾಗ್ತಾರಾ ಆರತಿ-ರವಿ? ಜಯಂ ರವಿ ಬಿಡ್ಕೊಟ್ರು ಬಿಗ್ ಹಿಂಟ್