DSPಯಾಗಿ ಅಧಿಕಾರ ವಹಿಸಿಕೊಂಡ ಟೀಮ್ ಇಂಡಿಯಾ ವೇಗಿ!
RCB ವೇಗಿ ಈಗ ಖಡಕ್ ಪೊಲೀಸ್ ಆಫೀಸರ್!
ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅಧಿಕೃತವಾಗಿ DSPಯಾಗಿ ನೇಮಕಗೊಂಡಿದ್ದಾರೆ.
ಟೀಮ್ ಇಂಡಿಯಾ ಎಲ್ಲಾ ಸ್ವರೂಪದ ಖಾಯಂ ಸದಸ್ಯನಾಗಿರುವ ಸಿರಾಜ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ
ಮಾರಕ ಬೌಲಿಂಗ್ ಗೆ ಹೆಸರುವಾಸಿಯಾಗಿರುವ ಸಿರಾಜ್ ತೆಲಂಗಾಣ ಪೊಲೀಸರು ದೊಡ್ಡ ಜವಾಬ್ದಾರಿಯನ್ನೇ ನೀಡಿದ್ದಾರೆ.
ಸಾಧಾರಣ ಆಟೋ ಚಾಲಕನ ಮಗನಾಗಿರುವ ಸಿರಾಜ್ ಈ ಹಂತಕ್ಕೆ ತಲುಪಲು ಸಾಕಷ್ಟು ಶ್ರಮಿಸಿದ್ದಾರೆ
ಸಾಧಿಸುವ ಛಲವಿದ್ದರೆ ಬಡತನ ಅಡ್ಡಿ ಬರುವುದಿಲ್ಲ ಎಂದು ತೋರಿಸುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
RCB ವೇಗಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈಗ ಅವರನ್ನು ಹೈದರಾಬಾದ್ DSPಯನ್ನಾಗಿ ಮಾಡಿದೆ.
ಮಾರ್ಚ್ 13, 1994 ರಂದು ಹೈದರಾಬಾದ್ ನಲ್ಲಿ ಜನಿಸಿದ ಸಿರಾಜ್ ಪೊಲೀಸ್ ಕೆಲಸದಿಂದ ಭಾರಿ ವೇತನವನ್ನೇ ಪಡೆಯಲಿದ್ದಾರೆ.
ತೆಲಂಗಾಣ ಪೊಲೀಸ್ ನಲ್ಲಿ ಡಿಎಸ್ಪಿಯ ವೇತನ ಶ್ರೇಣಿ 58850 ರೂ.ಗಳಿಂದ 137050 ರೂ.ಗಳವರೆಗೆ ಇರುತ್ತದೆ.