ತಪ್ಪಿಯೂ ಈ ಆಹಾರಗಳನ್ನು ನಾಯಿಗಳಿಗೆ ಕೊಡಬೇಡಿ!
ಹಲವಾರು ಜನರು ಈ ಆಹಾರವನ್ನು ನಾಯಿಗೆ ಪ್ರತಿದಿನ ಕೊಡುತ್ತಿರುತ್ತಾರೆ
ಆದ್ರೆ ಈ ಆಹಾರಗಳು ಕೆಲ ನಾಯಿಗಳಿಗೆ ವಿಷವಾಗಬಹುದು
ಹಾಲು : ಮುಖ್ಯವಾಗಿ ನಾಯಿಗಳಿಗೆ ಹಾಲು ಕೊಡುವ ಮುನ್ನ ಎಚ್ಚವಾಗಿರಬೇಕು. ಕೆಲ ನಾಯಿಗಳಿಗೆ ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಅಲರ್ಜಿಯಂತಹ ಸಮಸ್ಯೆಯಿದ್ರೆ ಹಾಲು ಮತ್ತು ಡೈರಿ ಐಟಂಗಳನ್ನು ಕೊಡಬೇಡಿ
ಆಲ್ಕೋಹಾಲ್ : ನಾಯಿಗಳಿಗೆ ಆಲ್ಕೋಹಾಲ್ನ ಮಾದಕವನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ, ಇದು ಮಾರಕವಾಗಬಹುದು
ಸೇಬು, ಏಪ್ರಿಕಾಟ್, ಚೆರ್ರಿ, & ಪ್ಲಮ್ ಸೀಡ್ಸ್ ಹಣ್ಣುಗಳು : ಈ ಹಣ್ಣುಗಳ ಬೀಜವು ನಾಯಿಗಳ ಹೊಟ್ಟೆಯಲ್ಲಿ ಜೀರ್ಣವಾಗದಿದ್ದರೆ ನಾಯಿಗಳ ಆರೋಗ್ಯ ಹಾಳಾಗುತ್ತದೆ
ಕೇಫಿನ್ : ಕಾಫಿ, ಟೀಯಂತಹ ಪಾನಿಯಗಳನ್ನು ನೀಡಬೇಡಿ. ಇದನ್ನು ಸೇವಿಸಿದರೆ ಅತಿಸಾರ, ವಾಂತಿಯಾಗುತ್ತದೆ
ಅಣಬೆಗಳು : ಮಾಂಸದ ರೀತಿ ಕಾಣುವ ಅಣಬೆಗಳನ್ನು ನಾಯಿ ಬೇಗನೆ ತಿಂದು ಬಿಡುತ್ತವೆ. ಆದ್ರೆ ಇದನ್ನು ತಿನ್ನೋದ್ರಿಂದ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ, ವಾಂತಿ, ಅತಿಸಾರ, ಭ್ರಮೆ ಮತ್ತು ಕೆಂಪು ರಕ್ತ ಕಣಗಳಿಗೆ ಹಾನಿ ಉಂಟುಮಾಡುತ್ತದೆ
ಉಪ್ಪು : ನಾಯಿಗಳು ಹೆಚ್ಚು ಉಪ್ಪು ತಿಂದರೆ ನಡುಕ, ರೋಗಗ್ರಸ್ತವಾಗುವಿಕೆಗಳು ಮತ್ತು ಕೋಮಾಗೆ ಹೋಗಬಹುದು
ಮಸಾಲೆಯುಕ್ತ ಆಹಾರ : ಮಸಾಲೆಯ ಆಹಾರವನ್ನು ನಾಯಿ ತಿಂದರೆ ವಾಂತಿ, ಹೊಟ್ಟೆ ಹುಣ್ಣು ಅಥವಾ ಅತಿಸಾರಕ್ಕೆ ಕಾರಣವಾಗಬಹುದು
Fish: ಗಂಟಲಲ್ಲಿ ಮೀನು ಮುಳ್ಳು ಸಿಕ್ಕೊಂಡಿದ್ಯಾ? ಟೆನ್ಶನ್ ಬೇಡ, ನಿಂಬೆ ರಸ ಯೂಸ್ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ