ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳೋರಿಗೆ ಬೆಂಗಳೂರು ಟ್ರಾಫಿಕ್ ಜಂಜಾಟದಲ್ಲಿ ನಿಲ್ದಾಣ ತಲುಪೋದೇ ದೊಡ್ಡ ಸಾಹಸ.
ವಿಮಾನದ ಸಮಯಕ್ಕಿಂತಲೂ ಎರಡು ತಾಸು ಮುಂಚೆ ಹೊರಟಿದ್ದರೂ ಸರಿಯಾದ ಸಮಯಕ್ಕೆ ತಲುಪುತ್ತೇವೆಂಬ ಗ್ಯಾರಂಟಿಯೂ ಒಮ್ಮೊಮ್ಮೆ ಇರೋದಿಲ್ಲ.
ಆದ್ರೆ ಈ ಟ್ರಾಫಿಕ್ ಜಂಜಾಟದಿಂದ ಪಾರಾಗಿ ಈಗ ಸುಲಭವಾಗಿ ಕೇವಲ 10- 15 ನಿಮಿಷಗಳಲ್ಲಿ ನಿಲ್ದಾಣ ತಲುಪಬಹುದು!! ಆಶ್ಚರ್ಯ ಆಯ್ತಾ? ಆದ್ರೆ ಇದು ನಿಜಕ್ಕೂ ಸತ್ಯ!
ಹೌದು, ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮತ್ತು ಸರಳಾ ಏವಿಯೇಷನ್ ಅಡ್ವಾನ್ಸ್ಡ್ ಏರ್ ಮೊಬಿಲಿಟಿ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಈ ಒಪ್ಪಂದದ ಪ್ರಕಾರ ಸರಳಾ ಏವಿಯೇಷನ್ ವಿದ್ಯುತ್ ಚಾಲಿತ, ಏಳು ಆಸನಗಳ ಎಲೆಕ್ಟ್ರಿಕ್ ವರ್ಟಿಕಲ್ ಟೇಕಾಫ್ ಮತ್ತು ಲ್ಯಾಂಡಿಂಗ್ (ಇ- ವಿಟೋಲ್) ವಿಮಾನವನ್ನು, ಅಂದರೆ ಏರ್ ಟ್ಯಾಕ್ಸಿ ಸೇವೆಯನ್ನ ಬೆಂಗಳೂರಿನಲ್ಲಿ ಆರಂಭಿಸಲಿದೆ.
ಎಲ್ಲವೂ ಅಂದುಕೊಂಡಂತಾದರೆ ಇನ್ನು ಕೆಲವೇ ದಿನಗಳಲ್ಲಿ ಓಲಾ, ಊಬರ್‌ಗಳಂತೆ ಏರ್ ಟ್ಯಾಕ್ಸಿಯನ್ನ ಬುಕ್ ಮಾಡಿ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ರಸ್ತೆ ಮಾರ್ಗಕ್ಕಿಂತಲೂ ವೇಗವಾಗಿ ತಲುಪಬಹುದು.
ಪರಿಸರ ಸ್ನೇಹಿಯಾಗಿ ಈ ವಿಮಾನಗಳನ್ನು ವಿನ್ಯಾಸಗೊಳಿಸಲಾಗಿದ್ದು, ಈ ಎಲೆಕ್ಟ್ರಿಕ್ ವಿಮಾನಗಳು ಗಂಟೆಗೆ 250 ಕಿ.ಮೀ. ವೇಗದಲ್ಲಿ ಹಾರಲಿದೆ. ಆರು ಪ್ರಯಾಣಿಕರು ಮತ್ತು ಪೈಲಟ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯದ ಈ ಏರ್ ಟ್ಯಾಕ್ಸಿ, ಸಂಚಾರ ದಟ್ಟಣೆಗೆ ಪರಿಹಾರ ಎಂಬಂತೆ ಬರಲಿದೆ.
ಈಗಾಗಲೇ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದೊಂದಿಗೆ ಪರವಾನಗಿ ಪಡೆದಿರುವ ಸರಳಾ, ಸದ್ಯದಲ್ಲೇ ಬೆಂಗಳೂರಿನಿಂದ ಏರ್ಪೋರ್ಟ್‌ಗೆ ಪ್ರಯಾಣವನ್ನೂ ಸರಳಗೊಳಿಸುವ ನಿರೀಕ್ಷೆ ಇದೆ.
Railway: ರೈಲಲ್ಲಿ ಬೆಡ್ ಶೀಟ್ ಪ್ರತಿ ದಿನ ಚೇಂಜ್ ಮಾಡಲ್ವಾ? ಪ್ರಯಾಣಿಕರನ್ನು ಕಾಡುತ್ತಿರೋ ಪ್ರಶ್ನೆಗೆ ಉತ್ತರ ಇಲ್ಲಿದೆ