ಈ Vegetables ಹಸಿಯಾಗಿ ತಿಂದ್ರೇನೇ ಒಳ್ಳೆಯದು!

ಈ Vegetables ಹಸಿಯಾಗಿ ತಿಂದ್ರೇನೇ ಒಳ್ಳೆಯದು!

ತರಕಾರಿಗಳನ್ನು ತಿನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ

ಕೆಲ ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ

ಈರುಳ್ಳಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಅಗತ್ಯವಾದ ಆಲಿಸಿನ್ ಎಂಬ ಪೋಷಕಾಂಶವಿದ್ದು ಅದರ ಸಂಪೂರ್ಣ ಲಾಭ ಪಡೆಯಲು ಈರುಳ್ಳಿ ಹಸಿಯಾಗಿ ತಿನ್ನಬೇಕು

ಬೀಟ್ರೂಟ್ ನಲ್ಲಿ ಕಬ್ಬಿಣಾಂಶದ ಪ್ರಮಾಣ ಅಧಿಕವಾಗಿದೆ, ಹಾಗಾಗಿ ಇದನ್ನು ಹಸಿಯಾಗಿ ಅಥವಾ ಜ್ಯೂಸ್ ಮಾಡಿ ಕುಡಿದರೆ ಹೆಚ್ಚು ಲಾಭದಾಯಕ

ಬ್ರೊಕೊಲಿಯಲ್ಲಿ ವಿಟಮಿನ್ ಸಿ, ಫೈಬರ್ ಅಧಿಕ ಪ್ರಮಾಣದಲ್ಲಿರೋದ್ರಿಂದ ಇದನ್ನು ಸಲಾಡ್ ರೂಪದಲ್ಲಿ ತಿಂದ್ರೆ ಹೆಚ್ಚು ಲಾಭಕಾರಿ

ಕೆಲವೊಂದು ಬಗೆಯ ಡ್ರೈಫ್ರೂಟ್ಸ್ ಹುರಿದು ತಿನ್ನುವ ಬದಲು ಹಾಗೆ ತಿಂದರೆ ಬಹಳ ಒಳ್ಳೆಯದು

ಮೊಳಕೆ ಒಡೆದ ಧಾನ್ಯಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಸೇರಿ ಹಲವಾರು ಬಗೆಯ ಪೋಷಕಾಂಶ ಸಿಗುವುದರಿಂದ ಇದನ್ನು ಹಸಿಯಾಗಿ ತಿನ್ನೋದು ಒಳ್ಳೆಯದು

ಟೊಮೆಟೊ ಹಣ್ಣನ್ನು ಬೇಯಿಸಿ ತಿನ್ನುವುದಕ್ಕಿಂತ ಸಲಾಡ್ ರೂಪದಲ್ಲಿ ಹಸಿಯಾಗಿ ಸೇವನೆ ಮಾಡುವುದು ಒಳಿತು

ಹಸಿ ಬೆಳ್ಳುಳ್ಳಿಯಲ್ಲಿ ಕಂಡುಬರುವ ಉರಿಯೂತ ನಿವಾರಕ ಗುಣ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿ, ರಕ್ತದ ಒತ್ತಡ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ