ಬಹುತೇಕರಿಗೆ ತಲೆಗೆ ದಿಂಬು ಇಲ್ಲದೆ ನಿದ್ದೆಯೇ ಬರಲ್ಲ

ಅದರಲ್ಲೂ ಎರಡೆರಡು ದಪ್ಪ ದಿಂಬುಗಳನ್ನು ಇಟ್ಟುಕೊಂಡು ಎತ್ತರದಲ್ಲಿ ತಲೆ ಇರಿಸಿ ಮಲಗುವ ಅಭ್ಯಾಸವಿದೆ

ಆದರೆ ಇದು ನಿಜಕ್ಕೂ ಅಪಾಯಕಾರಿ ಅಭ್ಯಾಸ

ಆರೋಗ್ಯಕರ ಜೀವನಶೈಲಿಗಾಗಿ ನಿದ್ರೆ ನಮ್ಮ ಜೀವನದ ಪ್ರಮುಖ ಭಾಗವಾಗಿದೆ

ನಿದ್ರಾಹೀನತೆಗೆ ಬಲಿಯಾಗುವುದರಿಂದ ದೇಹದ ಸಮತೋಲನ ಹದಗೆಡುತ್ತದೆ

ಕುತ್ತಿಗೆ ನೋವು: ರಾತ್ರಿ ಮಲಗುವಾಗ ದಪ್ಪ ಅಥವಾ ಎರಡು ದಿಂಬು ಬಳಸುವುದರಿಂದ ಕುತ್ತಿಗೆಯಲ್ಲಿ ನೋವು ಉಂಟಾಗುತ್ತದೆ

ಬೆನ್ನು ನೋವು: ರಾತ್ರಿ ಮಲಗುವಾಗ ಹಲವರು ದಪ್ಪ ದಿಂಬನ್ನು ಬಳಸುವುದರಿಂದ ಬೆನ್ನುಮೂಳೆ ನೋವು ಉಂಟಾಗುತ್ತದೆ

ತಲೆಯಲ್ಲಿ ರಕ್ತ ಪರಿಚಲನೆ ಕಡಿಮೆ ಆಗುತ್ತೆ: ನೆತ್ತಿಗೆ ರಕ್ತ ತಲುಪುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರಬಹುದು

ಭುಜ-ತೋಳಿನ ನೋವು ಉಂಟಾಗುತ್ತದೆ

ಮಾನಸಿಕ ಸಮಸ್ಯೆ: ದಪ್ಪ ದಿಂಬು ನಿಮ್ಮ ನಿದ್ರೆಯನ್ನು ಕೆಡಿಸಬಹುದು. ಇದರಿಂದಾಗಿ ನಿಮ್ಮ ಒತ್ತಡದ ಮಟ್ಟವೂ ಹೆಚ್ಚಾಗುತ್ತದೆ.